ಬಂಟ್ವಾಳ, ಜ 16(Daijiworld News/MSP): ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾದ ಪ್ರದಾನ ಮಂತ್ರಿ ಬಲ ಪುರಸ್ಕಾರ ಪ್ರಶಸ್ತಿ ಬಂಟ್ವಾಳ ತಾಲೂಕಿನ ಮೂರ್ಜೆ ಸುನಿತಾ ಪ್ರಭು ರವರಿಗೆ ಒಲಿದಿದೆ.
ಈ ಪುರಸ್ಕಾರ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರತಿಭಾನ್ವಿತೆಯಾಗಿರುವ ಈಕೆ 2019 ರಲ್ಲಿ ಅಮೇರಿಕಾದ ಫಿನೀಕ್ಸ್ ನಡೆದ 80 ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ ಲಭಿಸಿದೆ.
ಪ್ರಸಕ್ತ ಮಂಗಳೂರಿನ ಸಿ ಎಫ್ ಏ ಎಲ್ ವಿದ್ಯಾ ಸಂಸ್ಥೆಯಲ್ಲಿ ಪಿ ಯು ಸಿ ವ್ಯಾಸಂಗ ಮಾಡುತ್ತಿರುವ ಮೂರ್ಜೆ ಸುನಿತಾ ಪ್ರಭು ಬೆಳ್ತಂಗಡಿಯ ಉದ್ಯಮಿ ವಿನಾಯಕ ವುಡ್ ಇಂಡಸ್ಟ್ರೀಸ್ ನ ಮಾಲಕ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿ. ಉಜಿರೆ ಶ್ರೀ ಮಂಜುನಾಥೇಶ್ವರ ಸಿ ಬಿ ಯಸ್ ಸಿ ಶಾಲೆಯ ಹಳೆ ವಿದ್ಯಾರ್ಥಿನಿ.
ಜನವರಿ 22 ರಂದು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ರವರಿಂದ ಈ ಬಾಲ ಪುರಸ್ಕಾರ ಪಡೆಯಲಿದ್ದಾರೆ . ಜೊತೆಗೆ ಜನವರಿ 26 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲೂ ಭಾಗವಹಿಸಲಿದ್ದು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಪೋಷಕರಿಂದ ದೇಶ ವಿದೇಶಗಳ ಗಣ್ಯ ಅತಿಥಿಗಳನ್ನುಭೇಟಿಯಾಗುವ ಅವಕಾಶವಿದೆ .