ಮಂಗಳೂರು, ಜ.14 (Daijiworld News/PY) : ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ನಕಲಿ ವೈದ್ಯನೊಬ್ಬ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಲು ಯತ್ನಿಸಿದ್ದು, ಸಿಬ್ಬಂದಿಗಳು ಸಂಶಯಗೊಂಡು ವಿಚಾರಿಸಿದಾಗ ಪರಾರಿಯಾದ ಘಟನೆ ನಡೆದಿದೆ.
ನಕಲಿ ವೈದ್ಯನೆಂದು ಬಂದ ವ್ಯಕ್ತಿಯನ್ನು ಶಿವಮೊಗ್ಗದ ಮಹಮ್ಮದ್ ಹಬೀಬ್ ಹುಸೈನ್ (28) ಎಂದು ಗುರುತಿಸಲಾಗಿದೆ.
ಮಹಮ್ಮದ್ ಹಬೀಬ್ ಹುಸೈನ್ ಎಂಬಾತ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಬ್ಬರ ಹೆಸರು ಹೇಳಿ ರೋಗಿಗಳ ತಪಾಸಣೆ ಮಾಡಲು ಯತ್ನಿಸಿದ್ದ. ಈತನನ್ನು ನೋಡಿ ಸಂಶಯಗೊಂಡ ಆಸ್ಪತ್ರೆಯ ಸಿಬ್ಬಂದಿಗಳು ಪ್ರಶ್ನಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಮಹಮ್ಮದ್ ಹಬೀಬ್ ಹುಸೈನ್ನ ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.