ಕಡಬ, ಜ 11 (Daijiworld News/MSP): ಕಳವು ಮಾಡಿ ತಂದಿರುವ ಜಾನುವಾರು ಅಡ್ಡೆಗೆ ದಾಳಿ ನಡೆಸಿದ ಕಡಬ ಪೋಲೀಸರು ಓರ್ವನನ್ನು ಬಂಧಿಸಿ,ದನಕರುಗಳು ಸೇರಿದಂತೆ ಕತ್ತಿ, ತೂಕದ ಮಾಪನಗಳನ್ನು ವಶಪಡಿಸಿಕೊಂಡ ಘಟನೆ ಕಡಬ ತಾಲೂಕಿನ ಕೈೊಲ ಗ್ರಾಮದ ಬಡ್ಡಮೆ ಎಂಬಲ್ಲಿ ನಡೆದಿದೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಕಡಬ ಪೋಲೀಸರು ಮಹಮ್ಮದ್ ಮುಸ್ತಫಾ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಇಲಿಯಾಸ್ ಎಂಬವ ಪರಾರಿಯಾಗಿದ್ದಾನೆ. ಮುಂಜಾನೆ ೪ ಗಂಟೆಗೆ ಸುಮಾರಿಗೆ ದಾಳಿ ಮಾಡಿದ ಪೋಲೀಸರು ಆರೋಪಿಯ ಮನೆಗೆ ಹಿಂಭಾಗದಲ್ಲಿ ಕಟ್ಟಿ ಹಾಕಿರುವ ದನಕರುಗಳನ್ನು ಹಾಗೂ ಮಚ್ಚುಗಳು,ತೂಕದ ಮಾಪನಗಳು, ಬುಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ದನಕರುಗಳು ಅಂದಾಜು ಮೌಲ್ಯ 20,000 ಹಾಗೂ ಇತರ ಸಾಮಾಗ್ರಿಗಳ ಮೌಲ್ಯ 4,000 ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕಡಬ ಪೋಲಿಸ್ ಠಾಣೆಯಲ್ಲಿ ಕಳವು ಮತ್ತು ಪ್ರಾಣಿ ಹಿಂಸೆ ಪ್ರಕರಣ ದಾಖಲಾಗಿದೆ.