ಉಳ್ಳಾಲ, ಜ 11(Daijiworld News/MSP): ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಈ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ದೇಶದ ನೂರಾರು ವಿವಿಯ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಮುಸ್ಲಿಂ ಮಾತ್ರ ಅಲ್ಲ ಬಹುಸಂಖ್ಯಾತ ಹಿಂದೂಗಳು ಕೂಡಾ ಎನ್ ಅರ್ ಸಿ ವಿರುದ್ದ ಬೀದಿಗಿಳಿದಿದ್ದಾರೆ. ಆದರೆ ಸಂಘ ಪರಿವಾರದ ಕನಸಿನಂತೆ ಸೌಹಾರ್ದದ ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರ ವನ್ನಾಗಿ ಮಾಡಲು ಬಿಡೆವು ಎಂದು ಡಿವೈಎಫ್ ಐ ಮುಖಂಡ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಅವರು ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಕೊಣಾಜೆ ಸಮೀಪದ ಗ್ರಾಮಚಾವಡಿಯಲ್ಲಿ ಮುಸ್ಲಿಂ ಜಮಾಅತ್ ಒಕ್ಕೂಟದಿಂದ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮೊನ್ನೆ ನಡೆದ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಘಟನೆಗೆ ನೇರ ಪೊಲೀಸರೇ ಕಾರಣರಾಗಿದ್ಸಾರೆ. ಕರ್ನಾಟಕದ ಅಯೋಗ್ಯ ಸರಕಾರದ ನಾಲಾಯಕ್ ಮುಖ್ಯಮಂತ್ರಿ ಯಾರ್ಯಾದ್ದೋ ಮಾತು ಕೇಳಿ ಗಲಭೆಯಲ್ಲಿ ಮೃತಪಟ್ಟವರಿಗೆ ಘೋಷಿಸಿದ ಪರಿಹಾರವನ್ನೂ ವಾಪಸ್ಸು ಪಡೆದಿರುವುದು ನಾಚಿಕೆಯ ಸಂಗತಿಯಾಗಿದೆ.ಭಾರತ ಪಾಕಿಸ್ತಾನ ಭಾಗ ಆದಗಲೂ ಮಹಮ್ಮದ್ ಆಲಿ ಜಿನ್ನಾ ಭಾರತದ ಮುಸ್ಲಿಮರನ್ನೂ ಅಲ್ಲಿಗೆ ಕರೆದರು. ಅದರೆ ಇಲ್ಲಿಯ ಮುಸ್ಲಿಮರು ರಾಷ್ಟ್ರ ಪ್ರೇಮ ಮೆರದು ನಾವು ಭಾರತೀಯರು ಎಂದುಹೇಳಿ ಇಲ್ಲೇ ಉಳಿದುಕೊಂಡು ಬದುಕು ಸಾಗಿಸಿದ್ದಾರೆ.
ಇದು ಸೌಹಾರ್ದ ತೆಯ ರಾಷ್ಟ್ರ. ಈ ಕಾಯ್ದೆಯ ವಿರುದ್ದದ ಹೋರಾಟಕ್ಕೆ ಭಾರತೀಯರೆಲ್ಲರೂ ಕೈ ಜೋಡಿಸಿದ್ದು ಇದು ಹೋರಾಟದ ಆರಂಭ ಮಾತ್ರ ಎಂದು ಹೇಳಿದರು.ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ, ಇದು ಯಾವುದೇ ಪಕ್ಷ, ಧರ್ಮದ ವಿರುದ್ದದ ಹೋರಾಟವಲ್ಲ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಸಂವಿಧಾನದ ರಕ್ಷಣೆಗಾಗಿ ಆರಂಭವಾದ ಹೋರಾಟ.
ಆರ್ಥಿಕ ಸಮಸ್ಯೆ, ಉದ್ಯೋಗ ಸಮಸ್ಯೆ ಸೇರಿದಂತೆ ನೂರಾರು ಜ್ವಲಂತ ಸಮಸ್ಯೆಗಳನ್ನು ಮರೆ ಮಾಚುವುದಕ್ಕಾಗಿ ಬಿಜೆಪಿಯವರು ಈ ಕಾಯ್ದೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಜನರನ್ನು ಕಷ್ಟಗಳಿಗೆ ತಳ್ಳುವ ಕಾನೂನು ನಮಗೆ ಅಗತ್ಯವೇ ಇಲ್ಲ. ದೇಶದಲ್ಲಿ ಈ ಕಾಯ್ದೆಯ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಟ ಮಾಡ್ತಾ ಇದ್ದಾರೆ. ಕೊನೆಯ ಉಸಿರು ಇರುವವರೆಗೆ ಈ ಕಾಯ್ದೆಯ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದರು.
ಮೂಡಬಿದಿರೆ ಎಸ್ಸೆಸ್ಸೆಫ್ ಮಾಜಿ ಅಧ್ಯಕ್ಷ ಹುಸೈನ್ ಅಹ್ಸನಿ ಮುಈನ್ ಮಾತನಾಡಿ, ಸ್ವಾತಂತ್ರದ ಹೋರಾಟದಲ್ಲಿ ತಲೆ ಕೊಟ್ಟವರು ನಾವು. ಭಾರತದ ನೆಲ ಜಲ ಸಂರಕ್ಷಣೆಗೆ ನಮ್ಮ ಕೊಡುಗೆಯೂಇದೆ. ಇತಿಹಾಸದಲ್ಲಿ ಯಾವುದೇ ಹಿಂದೂ ರಾಜನೇ ಅಗಲಿ ಮುಸ್ಲಿಮರನ್ನು ಹೊರಗಿಟ್ಟು ಆಳ್ವಿಕೆ ಮಾಡಿದ ಇತಿಹಾಸ ವಿಲ್ಲ. ಹಾಗೆ ಇರುವಾಗ ಇಂದಿಗೂ ಅಂತಹ ಆಡಳಿತ ಸಾಧ್ಯವಿಲ್ಲ. ಮೂಲನಿವಾಸಿಗಳೆಂದು ಹೇಳುವ ಹಕ್ಕು ಮುಸ್ಲಿಮರಿಗೂ ಇದೆ.ಇಲ್ಲಿ ಜಾತಿ ಧರ್ಮ, ಜನಾಂಗ ಎಂದು ವಿಭಜಿಸದೆ ಸೌಹಾರ್ದ ತೆಯ ಭಾರತ ಕಟ್ಟೋಣ ಎಂದರು.
ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಮುಸ್ಲಿಮರು ಅಲ್ಲ ಆರ್ಯರು ಈ ದೇಶಕ್ಕೆ ವಲಸೆ ಬಂದವರು .ಗೋವಿನ, ರಾಮಮಂದಿರ, 371 ಕಾಯ್ದೆ ಮೊದಲಾದ ವಿಷಯಗಳ ವೆಲಿಡಿಟಿ ಈಗ ಮುಗಿಯಿತು. ಇದೀಗ ಜನರನ್ನು ಮತದಾನದ ಸಂದರ್ಭದಲ್ಲಿ ಭಾವನಾತ್ಮಕ ವಾಗಿ ಹಿಡಿದಿಡಿಲುಮಾಡಿದ ಷಡ್ಯಂತ್ರವಾಗಿದೆ ಈ ಕಾಯ್ದೆಯ ವಿಚಾರ ಎಂದು ಹೇಳಿದರು.
ಫರೀದ್ ನಗರ ರಿಫಾಯಿ ಜುಮಾ ಮಸೀದಿಯ ಮುದರ್ರಿಸ್ ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೋಸಿ ಹರೇಕಳ ಸಭೆ ಉದ್ಘಾಟಿಸಿದರು. ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ತ್ವಲಬಾ ವಿಂಗ್ ಅಧ್ಯಕ್ಷ ಅಹ್ಮದ್ ನಯೀಂ ಫೈಝಿ ಮುಕ್ವೆ , ಮುಸ್ಲಿಂ ಒಕ್ಕೂಟದ ಸಂಚಾಲಕ ಅಬ್ದುಲ್ ರಝಾಕ್, ಸಂಚಾಲಕ ಎಸ್.ಎಂ.ಆಸಿಫ್ ಇಕ್ಬಾಲ್ ಮಲಾರ್, ಮುಖಂಡ ಜಲೀಲ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯ ಝಾಹೀದ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಸ್ತಫಾ ಮಲಾರ್ ವಂದಿಸಿದರು. ಇರ್ಫಾನ್ ಮೌಲವಿ ಹಾಗೂ ಹಾರಿಸ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.