ಸುಳ್ಯ, ಜ 11 (Daijiworld News/MB) : ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶವಿವಾರ ಸಂಪಾಜೆಯ ಕೊಯಿನಾಡಿನಲ್ಲಿ ನಡೆದಿದೆ.
ಬೈಕ್ ಜಾರ್ಖಂಡ್ ನೊಂದಣಿಯದ್ದಾಗಿದ್ದು ಮೃತರನ್ನು ಜಾರ್ಖಂಡ್ ಮೂಲದವರೆಂದು ಶಂಕಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ.
ಇಂದು ಬೆಳಿಗ್ಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುವಾಗ ಕೊಯಿನಾಡಿನಲ್ಲಿ ಸರಕಾರಿ ಬಸ್ಗೆ ಢಿಕ್ಕಿಯಾದ ಪರಿಣಾಮ , ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.