ಬೆಳ್ತಂಗಡಿ, ಜ.11 (Daijiworld News/PY) : ಪ್ರೇಮ ವೈಫಲ್ಯದಿಂದ ವಿಷ ಸೇವಿಸಿದ್ದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಧರ್ಮಸ್ಥಳ ದಿಡಿಂಬಿ ನಿವಾಸಿ ಸಂದೀಪ್ ಎಂದು ತಿಳಿದುಬಂದಿದೆ.
ಸಂದೀಪ್ನ ಪ್ರೇಯಸಿಯು ಮನೆಯವರ ಮಾತಿನಂತೆ ಸಂದೀಪ್ನಿಂದ ದೂರವಾಗಿದ್ದಳು.ಸಂದೀಪ್ ಎಷ್ಟೇ ಒತ್ತಾಯಿಸಿದರೂ ಆಕೆ ಪ್ರೀತಿಗೆ ಸ್ಪಂದಿಸದ ಕಾರಣ ನೊಂದ ಸಂದೀಪ್ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ವಿಷ ಸೇವಿಸಿದ್ದ.
ತಕ್ಷಣವೇ ಸಂದೀಪ್ನನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಂದೀಪ್ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.