ಮಂಗಳೂರು, ಜ 11 (Daijiworld News/MB) : ದಾಖಲೆ ರಹಿತ ಸುಮಾರು 5.48 ಲಕ್ಷ ರೂಪಾಯಿಯ ವಿದೇಶಿ ಕರೆನ್ಸಿಗಳನ್ನು ಹೊಂದಿದ್ದ ದುಬೈಗೆ ತೆರಳುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಸಿಎಫ್ಎಸ್ಎಫ್ ಅಧಿಕಾರಿಗಳು ಶನಿವಾರ ಮುಂಜಾನೆ 6.30 ಗಂಟೆಗೆ ಪ್ರಯಾಣಿಕರ ಬ್ಯಾಗೇಜುಗಳ ತಪಾಸಣೆ ಮಾಡುತ್ತಿದ್ದ ವೇಳೆ ದುಬೈಗೆ ಸ್ಪಯ್ಸ್ ಜೆಟ್ ವಿಮಾನದ ಮೂಲಕ ತೆರಳಲಿದ್ದ ಪ್ರಯಾಣಿಕ ಶಾಹುಲ್ ಹಮೀದ್ನ ಕೈ ಚೀಲದಲ್ಲಿ ಅನುಮಾನಾಸ್ಪದ ಚಿತ್ರವನ್ನು ಗಮನಿಸಿದ್ದು ಪರಿಶೀಲನೆ ನಡೆಸಿ ವಿದೇಶಿ ಕರೆನ್ಸಿಗಳನ್ನು ಪತ್ತೆ ಹಚ್ಚಿದ್ದಾರೆ.
ಪ್ರಯಾಣಿಕನಿಂದ ಯುಎಸ್ ಡಾಲರ್ (76x100), ಚೀನೀ ಕರೆನ್ಸಿ (1000x10 ಮತ್ತು 110x10), ಮಲೇಷ್ಯಾ ಕರೆನ್ಸಿ (50x1, 10x01 ಮತ್ತು 1x3), ಮತ್ತು ಟರ್ಕಿ ಕರೆನ್ಸಿ (10x2) ಸೇರಿ ಅಂದಾಜು 5,48,000 ರೂಪಾಯಿಯನ್ನು ಹಾಗೂ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.