ಮಂಗಳೂರು,ಸೆ15: ದಕ್ಷ ಪೋಲಿಸ್ ಅಧಿಕಾರಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ ಜೆ ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡಲು ಒತ್ತಾಯಿಸಿ, ಜಿಲ್ಲಾ ಬಿಜೆಪಿ ವತಿಯಿಂದ ಇಂದು, ಜಿಲ್ಲಾಧಿಕಾರಿಯ ಕಚೇರಿ ಮುಂಬಾಗ ಬೃಹತ್ ಪ್ರತಿಭಟನೆ ನಡೆಯಿತು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಜಾರ್ಜ್ ರನ್ನು ಸಂಪುಟದಿಂದ ಕೈ ಬಿಡಲು ಬಿಜೆಪಿ ಆಗ್ರಹಿಸುತ್ತಾ ಬಂದಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಸಂಪುಟ ಮಂತ್ರಿಯನ್ನು ರಕ್ಷಿಸಲು ಸಿಐಡಿ ತನಿಖೆಗೆ ಕೊಟ್ಟು ಹೈ ತೊಳೆದುಕೊಂಡಿದ್ರು, ಮತ್ತು ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿತ್ತು. ಆದ್ರೆ ಇದನ್ನು ಪ್ರಶ್ನಿಸಿ ಅವರ ಕುಟುಂಬದವರು ಸುಪ್ರಿಂ ಕೋರ್ಟ್ ನ ಮೊರೆ ಹೋಗಿ ಸಿಬಿಐ ಮೂಲಕ ನ್ಯಾಯ ಒದಗಿಸಬೇಕೆಂದು, ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾದ್ಯಾಕ್ಷ ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ, ದೇವದಾಸ್ ಶೆಟ್ಟಿ, ಡಿವೈಎಸ್ಪಿ ಗಣಪತಿ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಇವರು ದಕ್ಷಿಣ ಕನ್ನಡ ವಿವಿಧ ಸ್ಥಳದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಆತ್ಮಹತ್ಯೆಗೆ ಸಚಿವ ಕೆ ಜೆ ಜಾರ್ಜ್ ನೇರ ಹೊಣೆಯಾಗಿದ್ದಾರೆ, ಆದ್ರೆ ಮುಖ್ಯಮಂತ್ರಿಗಳು ಮಾತ್ರ ಅವರ ರಕ್ಷಣೆಗೆ ನಿಂತಿದ್ದಾರೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮೊನಪ್ಪ ಭಂಡಾರಿ, ಸತ್ಯಜಿತ್ ಸುರತ್ಕಲ್, ಭರತ್ ಶೆಟ್ಟಿ . ಕಿಶೋರ್ ರೈ ವೇದವ್ಯಾಸ್ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.