ಉಪ್ಪಿನಂಗಡಿ, ಜ 11 (Daijiworld News/MB) : ರೆಸಾರ್ಟ್ ಒಂದರಲ್ಲಿ ಹನಿಟ್ಯ್ರಾಪ್ ದಂಧೆ ಮಾಡುತ್ತಿದ ಆರೋಪದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಈಗಾಗಲೇ ಬಂಧಿಸಿದ್ದು ಪರಾರಿಯಾದ ಮೂವರಲ್ಲಿ ಓರ್ವನನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಆರೋಪಿಗಳಾದ ಕುಶಾಲನಗರ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ರನ್ನು ಈಗಾಗಲೇ ಬಂಧಿಸಲಾಗಿದ್ದು ಈಗ ಆರೋಪಿ ವಿಟ್ಲದ ಜಮಾಲುನನ್ನು ಪೊಲೀಸರು ಬಂಧಿಸಿದ್ದು ಇನಿಬ್ಬರು ಆರೋಪಿಗಳಾದ ನೌಶಾದ್ ಹಾಗೂ ಜೀವನ್ ಎಂಬವರ ಪತ್ತೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ.
ಈ ಆರೋಪಿಗಳು ಯುವಕರು ಯುವತಿಯರೊಂದಿಗೆ ಇದ್ದ ಸಂದರ್ಭದಲ್ಲಿ ತಾವು ಪೊಲೀಸರು ಎಂದು ಹೇಳಿಕೊಂಡು ಕೊಠಡಿಗೆ ನುಗ್ಗಿ ಹುಡುಗಿಯರೊಂದಿಗೆ ಫೋಟೋ ತೆಗೆದು ಅದನ್ನು ಮಾಧ್ಯಮದವರಿಗೆ ನೀಡುವುದಾಗಿ ಬೆದರಿಕೆ ಹಾಕಿ 10ಲಕ್ಷ ಬೇಡಿಕೆ ಇಟ್ಟು ಹನಿಟ್ಯ್ರಾಪ್ ನಡೆಸುತ್ತಿದ್ದರು.