ಮಂಗಳೂರು, ಜ 10 (DaijiworldNews/SM): ಸಾಮಾಜಿಕ ಜಾಲ ತಾಣದಲ್ಲಿ ಮಂಗಳೂರು ಖಾಝಿ ವಿರುದ್ಧ ಉದ್ರೇಕಕಾರಿ ಸಂದೇಶ ಪ್ರಕಟಿಸಿದ್ದ ವ್ಯಕ್ತಿಯೋರ್ವನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕುತ್ತೆತ್ತೂರು ಪೋಸ್ಟ್ ಆಫೀಸ್ ಬಳಿ ನಿವಾಸಿ ಹಸನ್ ಎಂ.ಎಚ್. ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ಡಿಸೆಂಬರ್ 31ರಂದು ‘ಸುನ್ನಿ ಐಕ್ಯ ಗ್ರೂಪ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಮಂಗಳೂರು ಖಾಝಿಯವರ ವಿರುದ್ಧ ಉದ್ರೇಕಕಾರಿ ಸಂದೇಶವೊಂದನ್ನು ಪ್ರಕಟಿಸಿದ್ದ. ಅಲ್ಲದೆ ಅವಹೇಳನಕಾರಿ ಸಂದೇಶಗಳುಲ್ಲ ಸ್ಕ್ರೀನ್ ಶಾಟ್ ಗಳನ್ನು ಗ್ರೂಪ್ ನಲ್ಲಿ ರವಾನಿಸಿದ್ದ. ಈ ಹಿನ್ನೆಲೆ ಆರೋಪಿತ ಯುವಕನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಉತ್ತರ ಠಾಣಾ ಪೊಲೀಸರು ಆರೋಪಿಯ ಪತ್ತೆ ಬಲೆ ಬೀಸಿದ್ದಾರೆ. ಹಾಗೂ ಸಾಮಾಜಿಕ ಜಾಲ ತಾಣದ ಮೇಲೆ ಸಂಪೂರ್ಣ ನಿಗಾ ಇರಿಸಿದ್ದಾರೆ.