ಮಂಗಳೂರು, ಜ 10 (Daijiworld News/MSP): ಆರಕ್ಷಕರು ನಮ್ಮ ಜೀವನದ ನಿಜವಾದ ಹೀರೋಗಳು ಪೊಲೀಸರು ವೈಯಕ್ತಿಕ ಜೀವನವನ್ನು ಬದಿಗಿಟ್ಟು ಹಗಲು ರಾತ್ರಿ ಕಷ್ಟ ಪಟ್ಟು ಶಾಂತಿಯನ್ನು ಕಾಪಾಡಲು ಶ್ರಮಿಸುತ್ತಾರೆ. ನೀವು ನಮಗೆ ಸ್ಪೂರ್ತಿ ಎಂದು ನಿಮ್ಮ ಶ್ರಮಕ್ಕೆ ನಮ್ಮ ಪ್ರಶಂಸೆ ಎಂದು ’ಜ್ಞಾನ ಸಂಜೀವಿನಿ’ ಎಂಬ ವಿದ್ಯಾರ್ಥಿಗಳ ತಂಡವೂ ಅರಕ್ಷರಿಗೆ ಪ್ರಶಂಸನಾ ಪತ್ರ ನೀಡಿದರು.
ಪ್ರಶಂಸನಾ ಪತ್ರದಲ್ಲಿ ಏನಿದೆ?
"ನಮ್ಮ ಊರನ್ನು ಕಾಯುವ ಹೀರೋಗಳಿಗೆ ನಮ್ಮ ಪ್ರಣಾಮಗಳು" ದೇಶದಲ್ಲಿ ಹಲವಾರು ದಿನಗಳಿಂದ ಶಾಂತಿ ಕದಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೋಮು ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಗಲು-ರಾತ್ರಿ ಒಂದು ಮಾಡಿ ದುಡಿಯುತ್ತಿರುವ ನಿಮಗೆ ನಾವು ಸದಾ ಚಿರಋಣಿ.
ಪ್ರಜ್ಞಾವಂತ ವಿದ್ಯಾರ್ಥಿಗಳಾದ ನಾವು ಹಲವು ದಿನಗಳಿಂದ ಹಿಂದೆ ನಡೆದ ಪ್ರತಿಭಟನೆಯ ವಿಡಿಯೋ ತುಣುಕುಗಳನ್ನು ಸೂಕ್ಷ್ಮವಾಗಿ ನೋಡಿದಾಗ ಪೊಲೀಸ್ ಇಲಾಖೆ ಅಂದು ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಜನಪರವಾಗಿತ್ತು ಎಂದು ಎದ್ದು ಕಾಣುತ್ತದೆ. ಹಲವಾರು ಮಂದಿ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸುತ್ತಾರೆ ಆದರೆ ನೀವು ಆ ರೀತಿಯ ನಿರ್ಧಾರ ತೆಗೆದಿದ್ದರೆ ’ಮಂಗಳೂರು ಎಂದಿಗೂ ಮರಳಿ ಹಿಂದಿನ ಪರಿಸ್ಥಿತಿಗೆ ಬರುತ್ತಿರಲಿಲ್ಲ’ ಎಂಬುದು ಅವರಿಗೆ ಅರಿವಿಲ್ಲ.
ತಾವುಗಳು ಒಂದು ಗುಂಡನ್ನು ಹಾರಿಸೋ ಮೊದಲು ನೂರು ಬಾರಿ ಯೋಚಿಸುತ್ತೀರಿ ಹಾಗೂ ನೀವು ಪೊಲೀಸ್ ಎಂಬುದು ಅನಂತರದ ವಿಷಯ. ಅದಕ್ಕಿಂತಲೂ ಮೊದಲು ನೀವು ಕೂಡ ಮನುಷ್ಯರು ನಿಮ್ಮಲ್ಲಿ ಮನುಷ್ಯತ್ವ ಎಂಬುದು ಇದೆ ಎಂದು ನಮ್ಮ ಮನದಲ್ಲಿದೆ ನಾವೆಲ್ಲರೂ ನಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಊರಿನ ರಕ್ಷಣೆ ಮಾಡುತ್ತಿರುವುದು ನಮ್ಮಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಮುಂದಕ್ಕೆ ದೇಶದ ಸೇವೆಗಾಗಿ ಪೊಲೀಸ್ ಇಲಾಖೆಗೆ ಸೇರಲು ಸ್ಪೂರ್ತಿ" ಎಂದು ಉಲ್ಲೇಖಿಸಲಾಗಿದೆ
ಪೊಲೀಸ್ ಉಪ ಆಯುಕ್ತ ಎಮ್.ಜಗದೀಶ್ , ಉಪ ನಿರೀಕ್ಷಕ ಪ್ರದೀಪ್ ಟಿ.ಆರ್ ಅವರಿಗೆ ಜ್ಞಾನ ಸಂಜೀವಿನಿ’ ಟೀಂ ಪ್ರಶಂಸಾ ಪತ್ರ ನೀಡಿದರು. ಈ ಸಂದರ್ಭ ತಂಡದ ಅರುಣ್ ಶೇಣವ, ಸಾಕ್ಷಾತ್ ಶೆಟ್ಟಿ, ವಿನೀತ್ ಪುತ್ರನ್, ದೀಕ್ಷಿತ್ ಕುಲಾಲ್, ಶಿವ ಪ್ರಸಾದ್, ಜೀವನ್ ರೈ, ಸ್ವಸ್ತಿಕ್ ಆಳ್ವ, ಪ್ರಜ್ವಲ್ ಶೇಣವ ಹಾಗು ಕೀರ್ತನ್ ದಾಸ್ ಉಪಸ್ಥಿತರಿದ್ದರು.