ಉಳ್ಳಾಲ, ಜ 9 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಮಾತನಾಡಿದ ಬಿಜೆಪಿ ಕಾರ್ಯಕರ್ತಗೆ ಅಮಾಧೇಯ ವ್ಯಕ್ತಿ ಕೊಲೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಆರೋಪಿತ ಅನಾಮಾಧೇಯ ವ್ಯಕ್ತಿಯ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿಯಲ್ಲಿರುವ ಮುಸ್ಲಿಂ ಕಾರ್ಯಕರ್ತ ಹಾಗೂ ವಕೀಲರೊಬ್ಬರಿಗೆ ಸಿಎಎ-ಎನ್ ಆರ್ ಸಿ ಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ ಎನ್ನುವ ಫೇಸ್ ಬುಕ್ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ವಿದೇಶದಿಂದ ಅನಾಮದೇಯ ಮುಸ್ಲಿಂ ವ್ಯಕ್ತಿಯೋರ್ವ ಅವರಿಗೆ ಬೆದರಿಕೆಯೊಡ್ಡಿದ್ದ. ಮಂಗಳೂರಿನ ಮುಸ್ಲಿಮರಾಗಿದ್ದರಿಂದ ನಿನ್ನನ್ನು ಸಿಮ್ಮನೆ ಬಿಟ್ಟಿದ್ದಾರೆ. ಇನ್ನು ಮುಂದೆ ಸಿಎಎ ಪರವಾಗಿ ಮಾತನಾಡಿದರೆ, ಸುಮ್ಮನೆ ಬಿಡುವುದಿಲ್ಲ ಎಂಬುವುದಾಗಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.