ಮಂಗಳೂರು, ಜ 9 (Daijiworld News/MB) : ಎನ್ಆರ್ಸಿ ಹಾಗೂ ಸಿಎಎ ಪರ ಮಾತನಾಡಿ ಈ ಕಾಯ್ದೆಯಿಂದಾಗಿ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಯುವ ನಾಯಕ ಮಹಮ್ಮದ್ ಅಸ್ಗರ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ಅಸ್ಗರ್ ಅವರು ಎನ್ಆರ್ಸಿ ಹಾಗೂ ಸಿಎಎಯಿಂದಾಗಿ ಮುಸ್ಲಿಂ ಸಮುದಾಯಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ವಿದೇಶದಿಂದ ಓರ್ವ ವ್ಯಕ್ತಿ ಕರೆ ಮಾಡಿ, "ನೀನು ಮುಸ್ಲಿಮನಾಗಿದ್ದು ಈ ರೀತಿ ಮಾತಾನಾಡಿದ್ದು ಸರಿಯಲ್ಲ. ಬಿಜೆಪಿಯವರು ನಿನಗೂ ಕೂಡ ಭಾರತದಲ್ಲಿ ಇರಲು ಜಾಗ ನೀಡುವುದಿಲ್ಲ. ಹಾಗಿದ್ದರೂ ನೀನು ಬಿಜೆಪಿಯವರೊಂದಿಗೆ ಸೇರಿ ಮುಸ್ಲಿಮರಿಗೆ ವಿರುದ್ಧವಾಗಿ ಮಾತನಾಡುತ್ತಿರುವೆ. ದಕ್ಷಿಣ ಕನ್ನಡದಲ್ಲಿ ಈ ಬಗ್ಗೆ ಮಾತನಾಡಿದರೆ ನೀನು ಜೀವಂತ ಉಳಿಯಲ್ಲ. ಇದು ನಿನಗೆ ಕೊನೆಯ ಎಚ್ಚರಿಕೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ" ಎಂದು ಅಸ್ಗರ್ ಅವರು ದೂರಿದ್ದಾರೆ.
ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಅಸ್ಗರ್ ಅವರು ತಿಳಿಸಿದ್ದಾರೆ.