ಮಂಗಳೂರು, ಜ.09 (Daijiworld News/PY) : ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜ.6 ರಂದು ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬ ಅಕ್ರಮವಾಗಿ ಸಾಕ್ಸ್ನಲ್ಲಿ ಅಡಗಿಸಿಟ್ಟು ತಂದಿದ್ದ. 336.7 ಗ್ರಾಂ ಚಿನ್ನದ ಮೌಲ್ಯ 13.43 ಲಕ್ಷ ಎಂದು ಅಂದಾಜಿಸಲಾಗಿದೆ. ಜ.7 ರಂದು ದುಬೈನಿಂದ ಬಂದಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರಿಂದ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಓರ್ವ ಪ್ರಯಾಣಿಕನಿಂದ ಪೇಸ್ಟ್ ರೂಪದಲ್ಲಿದ್ದ 21.24 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ಮತ್ತೋರ್ವನಿಂದ ಸುಮಾರು 29.06 ಲಕ್ಷ ರೂ. ಮೌಲ್ಯದ 716 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಮೂರು ಪ್ರಕರಣಗಳು ಸೇರಿದಂತೆ ಒಟ್ಟು 63 ಲಕ್ಷದ 73 ಸಾವಿರ ಮೌಲ್ಯದ 1 ಕೆ ಜಿ 575 ಗ್ರಾಂ ವಶಪಡಿಸಿಕೊಳ್ಳಲಾಗಿದ್ದು, ಅಕ್ರಮ ಚಿನ್ನ ವಶಪಡಿಸಿಕೊಂಡ ಕಸ್ಸಮ್ಸ್ ಅಧಿಕಾರಿಗಳು ಮೂವರು ಪ್ರಯಾಣಿಕರನ್ನು ಬಂಧಿಸಿದ್ದಾರೆ.