ಮಂಗಳೂರು, ಜ.09 (Daijiworld News/PY) : ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನರ್ ಒಂದು ವೈರಲ್ ಆಗ್ತಾ ಇದ್ದು, ಈ ಬ್ಯಾನರ್ ಅನ್ನು ನೋಡಿದವರಿಗೆ ಆಶ್ಚರ್ಯವಾಗೋದಂತು ಗ್ಯಾರಂಟಿ..!
ವಿವಾಹದ ಸಂದರ್ಭ ಗೆಳೆಯನಿಗೆ ಕೊಳೆತ ತರಕಾರಿ-ಹಣ್ಣುಗಳನ್ನು ಗಿಫ್ಟ್ ನೀಡಿ ತಮಾಷೆ ಮಾಡುವುದನ್ನು ನೋಡಿದ್ದೀರಿ. ಆದರೆ ಮಂಗಳೂರಿನ ಸ್ನೇಹಿತರ ತಂಡವೊಂದು ಇದರಿಂದ ಒಂದು ಹೆಜ್ಜೆ ಮುಂದಿಟ್ಟು ತನ್ನ ಸ್ನೇಹಿತನ ಮೊದಲ ರಾತ್ರಿಗೆ ಹಾರೈಸುವ ಮೂಲಕ ದೊಡ್ಡದಾದ ಬ್ಯಾನರ್ವೊಂದನ್ನು ಹಾಕಿದ್ದು. ಬ್ಯಾನರ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗ್ತಾ ಇದೆ.
ತನ್ನ ಸ್ನೇಹಿತನ ಮೊದಲ ರಾತ್ರಿಗೆ ಹಾರೈಸಿದ ಸ್ನೇಹಿತರ ತಂಡ, "ನಮ್ಮ ಮುಗ್ಧ ಗೆಳೆಯ ರಸಿಕ ಇಂದಿನ ಮದುಮಗ ವರ್ಣನ್ ಡಿಸೋಜಾ (ಬಿಜ್ಜೋಡಿ) ಇವರ ಮದುವೆ ನಂತರದ ಪ್ರಪ್ರಥಮ ಆಟ ಮೊದಲ ರಾತ್ರಿಯ ಸಂಭ್ರಮ. ದಿನಾಂಕ ಜ.4, 2020, ಸ್ಥಳ: ಸೋಪನ್ ಬಜ್ಜೋಡಿ ಮನೆಯಲ್ಲಿ , ಸಮಯ ರಾತ್ರಿ : 12 ಗಂಟೆಯಿಂದ ಮುಂಜಾನೆ ತ್ರಾಣ ಇರುವ ತನಕ, ಎದ್ದು ಬಿದ್ದು ಹೋರಾಡಿ ಬಾ ಗೆಳೆಯ! ನಿಮ್ಮ ಪ್ರಥಮ ರಾತ್ರಿಗೆ ಶುಭಕೋರುವವರು ಪಂಪ್ವೆಲ್ ಫ್ಲೈಓರ್ವದ ಅಂಚಿ ಮತ್ತು ಇಂಚಿ ಗೆಳೆಯರು, All the best for your 1st game" ಎಂದು ಬರೆದು ಹಾರೈಸಿದ್ದಾರೆ.