ಮಂಗಳೂರು, ಜ 09(Daijiworld News/MSP): ಸಾವರ್ಕರ್ ಬಗ್ಗೆ ಅಶ್ಲೀಲವಾಗಿ ಪುಸ್ತಕವನ್ನು ಬರೆಯುವ ಲೇಖಕ ಹಾಗೂ ಅದನ್ನು ಪ್ರಕಟಿಸುವವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪುಸ್ತಕವನ್ನು ದೇಶಾದ್ಯಂತ ತಕ್ಷಣ ನಿಷೇಧಿಸಬೇಕೆಂದು ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ಸಿಂಧೂ ಬಿ ರೂಪೇಶ್ ಅವರಿಗೆ ಮನವಿ ಸಲ್ಲಿಸಿದರು.
ಭೋಪಾಲ್ನಲ್ಲಿ ಕಾಂಗ್ರೆಸ್ಸಿನ ಸೇವಾದಳದ ತರಬೇತಿ ಶಿಬಿರದಲ್ಲಿ ವೀರ್ ಸಾವರ್ಕರ್ ಕಿತನೆ ವೀರ್? (ವೀರ ಸಾವರ್ಕರ್ ಎಷ್ಟು ವೀರರು?) ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದಲ್ಲಿ ಅತ್ಯಂತ ತ್ಯುಚ್ಛವಾಗಿ ದ್ವೇಷ ಪೂರಕವಾಗಿ ಕಟ್ಟುಕಥೆಗಳನ್ನು ಬರೆಯಲಾಗಿದೆ. ಇದರಿಂದ ಕಾಂಗ್ರೆಸ್ಸಿನವರು ಸ್ವಾತಂತ್ರ್ಯವೀರರನ್ನು ಅವಮಾನಿಸಲು ಎಷ್ಟು ಕೀಳು ಮಟ್ಟಕ್ಕೆ ಹೋಗಬಹುದು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಸಾವರ್ಕರ್ ಮಾತ್ರವಲ್ಲದೇ ಯಾವುದೇ ರಾಷ್ಟ್ರಪುರುಷರು ಹಾಗೂ ಕ್ರಾಂತಿಕಾರರ ಅವಮಾನವು ಯಾರಿಂದಲೂ ಆಗದಿರಲಿ. ಅದಕ್ಕಾಗಿ ಕೇಂದ್ರ ಸರ್ಕಾರವು ಇದರ ಬಗ್ಗೆ ಕೂಡಲೇ ಕಾನೂನನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.
ಕಾಂಗ್ರೆಸ್ಸಿನ ಶಿಬಿರದಲ್ಲಿ ದೇಶದ ಕ್ರಾಂತಿಕಾರರು ಸಲಿಂಗ ಸಂಬಂಧವನ್ನು ಇಟ್ಟುಕೊಳ್ಳುವ, ಮಸೀದಿಯ ಮೇಲೆ ಕಲ್ಲೆಸೆಯುವ, ಅದೇ ರೀತಿ ಅಲ್ಪಸಂಖ್ಯಾತ ಮಹಿಳೆಯರ ಬಲಾತ್ಕಾರ ಮಾಡುವವರಿದ್ದರು ಎಂದು ಬಿಂಬಿಸುವ ಅತ್ಯಂತ ಕೀಳುಮಟ್ಟದ ಪುಸ್ತಕವನ್ನು ವಿತರಿಸಿದ್ದಾರೆ. ಇದನ್ನ ಕೂಡಲೇ ನಿಷೇಧಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕಾಂಗ್ರೆಸ್ಸಿನ ಶಿಬಿರಗಳು ಸಾಮಾಜಿಕ ಸಾಮರಸ್ಯವನ್ನು ಹೇಗೆ ಹಾಳು ಮಾಡಬಹುದು, ಇದರ ತರಬೇತಿ ಕೇಂದ್ರ ಆಗಿದೆ, ಎಂಬುವುದು ಸಾಬೀತಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಜಿಲ್ಲಾ ಉಪಾಧ್ಯಕ್ಷ ಹರೀಶ್ ಶೆಟ್ಟಿ, ಬೊಕ್ಕಪಟ್ನ, ಶ್ರೀ ರಾಮಸೇನೆ ನಗರ ಉಪಾಧ್ಯಕ್ಷರು ವೆಂಕಟೇಶ್ ಪಡಿಯಾರ್, ಅ.ಭಾ.ವಿ.ಪ. ಜಿಲ್ಲಾ ಸಂಚಾಲಕ ಆಗ್ನೇಯ ಸತೀಶ್, ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಪವಿತ್ರಾನ್, ಪ್ರವೀಣ್, ಶಶಿಧರ್ ಬಾಳಿಗಾ, ವಿಶ್ವನಾಥ್ ಬೋಂದೆಲ್, ಸುಳ್ಯ , ಶಕ್ತಿನಗರ, ಹಿಂದೂ ಜನಜಾಗೃತಿ ಸಮಿತಿಯ ಪ್ರಭಾಕರ್ ನಾಯಕ್ , ಉಪೇಂದ್ರ ಆಚಾರ್ಯ, ಮಾಂಗಿರಾಮ್, ಸನಾತನ ಸಂಸ್ಥೆಯ ರೇಖಾ ಶೇಟ್, ಲೀಲಾವತಿ ನಾಯಕ್, ಪ್ರಮೀಳಾ ಎಂ.ಪಿ. ಇವರು ಉಪಸ್ಥಿತರಿದ್ದರು.