ಮಂಗಳೂರು, ಜ 09(Daijiworld News/MSP): ಸೂರ್ಯಗ್ರಹಣದ ಬೆನ್ನಲ್ಲೇ ಈ ವರ್ಷದ ಮೊದಲ ಚಂದ್ರಗ್ರಹಣವೂ ನಾಳೆ ಗೋಚರವಾಗಲಿದೆ. ಜ. 10ರಂದು ರಾತ್ರಿ 10.37ರಿಂದ 11ರ ಮುಂಜಾನೆ 2.42ರ ವೇಳೆಗೆ ಸಂಭವಿಸಲಿದ್ದು, ಗ್ರಹಣ ವೀಕ್ಷಣೆಗೆ ಪಿಲಿಕುಳದಲ್ಲಿ ಪಿಲಿಕುಳ ಮಾಡಲಾಗಿದೆ.
ಏಷ್ಯಾ, ಆಫ್ರೀಕಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಭಾರತದ ಎಲ್ಲಾ ನಗರಗಳಲ್ಲಿ ಅರೆನೆರಳಿನ ಚಂದ್ರಗ್ರಹಣ ಗೋಚರಿಸಲಿದೆ. ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣದಲ್ಲಿ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣ ನಮಗೆ ಕಾಣಸಿಗುತ್ತದೆ. ಆಗ ಚಂದ್ರನ ಬಿಂಬವು ತಾಮ್ರವರ್ಣ ಅಥವಾ ರಕ್ತವರ್ಣದಲ್ಲಿ ಕಂಗೊಳಿಸುತ್ತದೆ. ಶುಕ್ರವಾರ ಸಂಭವಿಸುವ ಚಂದ್ರಗ್ರಹಣದಲ್ಲಿ ಭೂಮಿಯ ಗಾಢನೆರಳಿದ ಬದಲಾಗಿ ತೆಳುನೆರಳು ಮಾತ್ರ ಚಂದ್ರನ ಮೇಲೆ ಬಿದ್ದ ರಕ್ತವರ್ಣ, ತಾಮ್ರ ವರ್ಣಕ್ಕೆ ಬದಲಾಗಿ "ಬೂದು ಬಣ್ಣ"ದಲ್ಲಿ ಗೋಚರಿಸುತ್ತಾನೆ.
ಗ್ರಹಣದ ಸಮಯದಲ್ಲಿ ಚಂದ್ರನ ಮೇಲ್ಮೈಯ ಶೇಕಡಾ 90ರಷ್ಟು ಭಾಗವು ಭೂಮಿಯಿಂದ ಆವರಿಸಲ್ಪಡುತ್ತದೆ. ನೆರಳಿನ ಹೊರಭಾಗ ಮಾತ್ರ ಕಾಣಿಸಿಕೊಳ್ಳುತ್ತದೆ. ಇದನ್ನು ಅರೆನೆರಳಿ ಗ್ರಹಣ ಅಥವಾ ತೋಳ ಚಂದ್ರಗ್ರಹಣ ಎಂದು ಕರೆಯುತ್ತಾರೆ. ಈ ಅಪರೂಪದ ವಿದ್ಯಾಮಾನವನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಿದ್ಧತೆ ಮಾಡಲಾಗಿದೆ ಎಂದು ವಿಜ್ಞಾನ ಕೇಂದ್ರದ ಡಾ| ಕೆ.ವಿ. ರಾವ್ ತಿಳಿಸಿದ್ದಾರೆ.