ವಿಟ್ಲ, ಜ 9 (Daijiworld News/MB) : ಕೆಟ್ಟು ನಿಂತಿದ್ದ ಲಾರಿ ಹಠತ್ತನೆ ಚಲಿಸಿದ ಪರಿಣಾಮ ಎದುರುಗಡೆ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಸಂಭವಿಸಿದೆ.
ಬುಧವಾರ ಲಾರಿಯೊಂದು ಕೆಟ್ಟು ಹೋದ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಗುರುವಾರ ಬೆಳಿಗ್ಗೆ ಆಟೋ ರಿಕ್ಷಾದಲ್ಲಿ ದುರಸ್ತಿ ಮಾಡಲು ಆಗಮಿಸಿದ್ದರು. ದುರಸ್ತಿ ವೇಳೆ ಲಾರಿ ನ್ಯೂಟ್ರಲ್ ಆದ ಪರಿಣಾಮ ಎದುರುಗಡೆ ಇದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಮುಂದೆ ಸಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ.
ರಿಕ್ಷಾದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯವಾಗಿಲ್ಲ.