ಬಂಟ್ವಾಳ, ಜ 08 (DaijiworldNews/SM): ಅಡಿಕೆ ಮರವೇರಿ ಅಡಿಕೆ ಕೀಳುತ್ತಿದ್ದ ವೇಳೆ ಮರ ತುಂಡಾಗಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ತಾಲೂಕಿನ ಅಮ್ಮುಂಜೆಯ ಮೂಡಾಯಿಕೋಡಿಯಲ್ಲಿ ಎಂಬಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೂಡಾಯಿಕೋಡಿ ನಿವಾಸಿ ಸೆಬಾಸ್ಟಿಯನ್ ವಿನ್ಸೆಂಟ್ ಸಿಕ್ವೇರಾ(60) ಮೃತ ದುರ್ದೈವಿಯಾಗಿದ್ದಾರೆ. ಅವರು ಜನವರಿ 08ರ ಬುಧವಾರದಂದು ತಮ್ಮ ತೋಟದಲ್ಲಿ ಅಡಿಕೆ ಕೀಳುತ್ತಿದ್ದರು. ಈ ಸಂದರ್ಭದಲ್ಲಿ ಅವರು ಏರಿದ್ದ ಮರ ಅರ್ಧದಿಂದ ತುಂಡಾಗಿದ್ದು, ಸೆಬಾಸ್ಟಿಯನ್ ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ.
ಘಟನೆಯಲ್ಲಿ ಸೆಬಾಸ್ಟಿಯನ್ ಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೃತರ ಭಾವ ಸಿರಿಲ್ ಕುವೆಲ್ಲೊ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.