ಮಂಗಳೂರು, ಜ.08 (Daijiworld News/PY) : "ಹಿಂದಿನ ಸರ್ಕಾರ ವಸತಿ ಯೋಜನೆಯಲ್ಲಿ ಮನೆಯನ್ನೇ ಕಟ್ಟದೇ ಫೇಕ್ ಬಿಲ್ ನೀಡಿ ಗೋಲ್ಮಾಲ್ ನಡೆಸಿದೆ" ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಬುಧವಾರ ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ವಿ ಸೋಮಣ್ಣ ಅವರು, "ಹಿಂದಿನ ಸರ್ಕಾರ ವಸತಿ ಯೋಜನೆಯಲ್ಲಿ ಮನೆಯನ್ನೇ ಕಟ್ಟದೇ ಫೇಕ್ ಬಿಲ್ ನೀಡಿ ಗೋಲ್ಮಾಲ್ ನಡೆಸಿದೆ. ಈ ವಿಷಯವಾಗಿ ತನಿಖೆ ಕೈಗೊಂಡು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ಧೇನೆ" ಎಂದು ಹೇಳಿದರು.
"ಪ್ರಸ್ತುತ, ನಾನು ಎಲ್ಲಾ 224 ಕ್ಷೇತ್ರಕ್ಕೆ 211 ಕೋಟಿ ಹಣವನ್ನು ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದೇನೆ, ಈ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಚನೆ ಮಾಡಿದಲ್ಲಿ ಅರ್ಧ ಕಟ್ಟಿದ ಮನೆಗಳನ್ನು ಪೂರ್ಣಗೊಳಿಸಲಾಗುವುದು, ಮನೆ ಕಾಮಗಾರಿ ವೀಕ್ಷಣೆಗೆ ಆಪ್ ಅನ್ನು ಕೂಡಾ ಪ್ರಾರಂಭಿಸಿದ್ದೇವೆ" ಎಂದು ತಿಳಿಸಿದರು.
"ವಸತಿ ಯೋಜನೆ ಪೂರ್ಣ ಮಾಡಲು ಸುಮಾರು 200 ಕೋಟಿ ರೂ ಬೇಕಾಗುತ್ತದೆ, ಅಷ್ಟೂ ಮೊತ್ತವನ್ನು ಈ ಮಾರ್ಚ್ನ ಒಳಗಡೆ ಮಾಡಲಾಗುವುದು, ಇನ್ನು ಕೇವಲ 15 ದಿನಗಳಲ್ಲಿ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ, ಇನ್ನು ಮುಂದಿನ ಬಾರಿಯಿಂದ ಒಂದು ಮನೆಗೆ 2 ಲಕ್ಷ ಹಣ ಬಿಡುಗಡೆಗೆ ಸಿಎಂ ಬಳಿ ವಿನಂತಿಸಿಕೊಳ್ಳುತ್ತೇನೆ" ಎಂದು ಭರವಸೆ ನೀಡಿದರು.