ಬೆಳ್ತಂಗಡಿ, ಜ 07 (DaijiworldNews/SM): ತಾಲೂಕಿನ ಲಾಯಿಲ ಓಡದಕರಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆ ಪೂರ್ವಭಾವಿ ಸಭೆ ಜನವರಿ 5ರ ಆದಿತ್ಯವಾರದಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರದಲ್ಲಿರುವ ರಕ್ತೇಶ್ವರಿ ಗುಡಿ ಜೀರ್ಣೋದ್ಧಾರದ ಪ್ರಯುಕ್ತ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು. ಅಧ್ಯಕ್ಷ ಲಕ್ಷ್ಮಣ ಸಫಲ್ಯ ಕನ್ನಾಜೆ, ಉಪಾಧ್ಯಕ್ಷರಾಗಿ ಜಯಂತ್ ರಾಘವೇಂದ್ರ ನಗರ, ಅಶೋಕ್ ಶೆಟ್ಟಿ ರಾಘವೇಂದ್ರ ನಗರ, ಎಸ್. ಗೋಪಾಲ್ ಶಂಭುಗ, ಉದಯ್, ಇಂದಿರಾ ಪ್ರಿಯದರ್ಶಿನಿ, ಧನಲಕ್ಷ್ಮೀ ಜನಾರ್ದನ ಧರ್ಮಸ್ಥಳ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ನಡೆಯಬೇಕಾದ ಪೂರ್ವ ನಿಯೋಜಿತ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ, ಹಲವು ಸಮಿತಿಗಳನ್ನು ರಚಿಸಿ ಅವುಗಳಿಗೆ ಮುಖ್ಯಸ್ಥರನ್ನು ನೇಮಕಗೊಳಿಸಿ ಜವಾಬ್ದಾರಿಗಳನ್ನು ಹಂಚಲಾಯಿತು. ಇನ್ನು ಬ್ರಹ್ಮ ಕಲಶೋತ್ಸವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತ ಕಾರ್ಯಗಳು ಭರದಿಂದ ಸಾಗುತ್ತಿವೆ.