ಮಂಗಳೂರು, ಜ 7(Daijiworld News/MSP): ಮಂದಾರ್ತಿ ಮೇಳದ ಪ್ರಧಾನ ಭಾಗವತರಾದ ಸುಬ್ರಹ್ಮಣ್ಯ ಆಚಾರ್ಯ ಅವರು ಜ.7ರ ಮಂಗಳವಾರ ನಗರದ ಕುಲಶೇಖರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಶರಣರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂದಾರ್ತಿ ಮೇಳದಲ್ಲಿ ಕಳೆದ ಅನೇಕ ವರ್ಷಗಳಿಂದ ಯಕ್ಷಗಾನದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಬಡಗತಿಟ್ಟುವಿನಲ್ಲಿ ತನ್ನದೇ ಛಾಪು ಮೂಡಿಸಿದ್ದ ಸುಬ್ರಹ್ಮಣ್ಯ ಆಚಾರ್ಯ ಪರಂಪರಾನುಗತ ಶೈಲಿಯನ್ನು ಅನುಸರಿಸುತ್ತಿದ್ದು ಅವರು ಯಕ್ಷರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸೋಮವಾರ ರಾತ್ರಿಯೂ ಭಾಗವತಿಕೆ ಮಾಡಿದ್ದರು
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ . ಕಂಕನಾಡಿ ಗ್ರಾಮಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.