ಮಂಗಳೂರು, ಜ 7 (Daijiworld News/MB) : ಮಂಗಳೂರಿಗೆ ಅಮಿತ್ ಶಾ ಅವರು ಭೇಟಿ ನೀಡಿದರೆ ಮಂಗಳೂರಿನ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಹೇಳಿದ ಎಂಎಲ್ಸಿ ಐವನ್ ಡಿಸೋಜಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು, "ನಗರದ ಶಾಂತಿ ಕದಡಲು ಕಾರಣ ಐವನ್ ಡಿಸೋಜಾ" ಎಂದು ಹೇಳಿದ್ದಾರೆ.
"ನಗರದಲ್ಲಿ ಶಾಂತಿಗೆ ಧಕ್ಕೆ ಉಂಟಾಗಲು ಐವನ್ ಡಿಸೋಜಾ ಅವರು ಹೊಣೆಗಾರರು, ಅವರು ಹಾಗೂ ಅವರಂತಹ ಮನಸ್ಥಿತಿ ಇರುವವರು ಈ ಜಿಲ್ಲೆಯಿಂದ ಹೊರಹಾಕಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತೇವೆ" ಎಂದು ತಿಳಿಸಿದರು.
ಗೃಹ ಸಚಿವ ಅಮಿತ್ ಸಾ ಅವರು ಮಂಗಳೂರಿಗೆ ಬರುವ ದಿನವನ್ನು ಇನ್ನೂ ಅಂತಿಮವಾಗಿಲ್ಲ. ಅವರು ಮಂಗಳೂರು, ಬೆಂಗಳೂರು, ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಆದರೆ ಶಾ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡುತ್ತಾರೆಯೋ ಇಲ್ಲವೋ ಅನುವುದು ಖಚಿತವಾಗಿಲ್ಲ.