ಮಣಿಪಾಲ, ಜ 6 (Daijiworld News/MB) : ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಅವ್ಯಾಚ್ಯವಾಗಿ ಬೈಯ್ದು ಜೀವ ಬೆದರಿಕ ಹಾಕಲಾಗಿದೆ. ಎಂದು ಮಹಿಳೆಯೋರ್ವರು ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.
ಹೊಂಗೆ ಶಾಹುಲ್, ಮುಲ್ಲಾ ಹುಸೈನ್, ಬಾತ್ಯಾ ಸಾಜೀದ್, ನನ್ನು ರಹೀಮಾ, ಕಾವಾ ಸಫೀಯಾ, ಕಾವಾ ರಿಜ್ವಾನ್, ಕಾವಾ ಕಯ್ಯೂಮ್, ಮುಲ್ಲಾ ಯಾಸ್ಮಿನ್, ಕರಾ ಇಸಾಕ್, ಹೊಂಗೆ ಸುಬ್ಹಾನ್ ಹಾಗೂ ಮುಲ್ಲಾ ಸಲೀಂ ಅವರ ಮೇಲೆ ದೂರು ದಾಖಲಾಗಿದೆ.
ಶನಿವಾರ ರಾತ್ರಿ ೮:೩೦ ಸುಮಾರಿಗೆ ಆರೋಪಿಗಳು ಕತ್ತಿ ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ನನಗೆ ಹಾಗೂ ನನ್ನ ಪತಿಗೆ ಬೈಯ್ದು "ಕಮೀಟಿ ಮೇಲೆ ಹೂಡುದ ಕೇಸನ್ನು ಹಿಂದೆ ಪಡೆಯಬೇಕು, ಇಲ್ಲದಿದ್ದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ" ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟು ಮಾತ್ರವಲ್ಲದೇ ಮನೆಯ ಕಿಟಕಿಯ ಗಾಜು ಹಾಗೂ ಸಿಮೆಂಟ್ ಶೀಟುಗಳನ್ನು ಒಡೆದು ಹಾಕಿದ್ದಾರೆ ಎಂದು ಶಿರೂರು ಗ್ರಾಮದ ಹಡವಿನಕೋಣೆಯ ಮೌಲಾಜಿ ಫಾತಿಮಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.