ಉಡುಪಿ, ಜ 25: ಸಾಮಾಜಿಕ ಜಾಲತಾಣದಲ್ಲಿ ತುಳುಬಾಷೆಯ ವಿರುದ್ದ ಅವಹೇಳನಕಾರಿ ಬರಹ ಪೋಸ್ಟ್ ಹಾಕಿದ ಕರವೇ ನಾರಯಣ ಗೌಡ ಬಣದ ಜಾನ್ ಎಂಬಾತನ ವಿರುದ್ದ ಕ್ರಮಕೈಗೊಳ್ಳಬೇಕೆಂದು ಕರವೇ ಛಲಪತಿ ಬಣ ಆಗ್ರಹಿಸಿದೆ. ಉಡುಪಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಛಲಪತಿ ಬಣದ ಅದ್ಯಕ್ಷ ಆದಿ ಬಾಸ್ಕರ್ , ಕರವಾಳಿ ಬಾಷೆ ಹಾಗೂ ಜನತೆಯ ಬಗ್ಗೆ ಅವಹೇಳನಕಾರಿ ಬರಹ ಪೋಸ್ಟ್ ಮಾಡಿರುವ ಜಾನ್ ಕರವಾಳಿಯ ಜನತೆ ಮುಂದೆ ಕ್ಷಮೆ ಯಾಚಿಸಬೇಕು ಎಂದು ಈ ಹಿಂದೆ ಒತ್ತಾಯಿಸಲಾಗಿತ್ತು. ಆದ್ರೆ ಆತ ಇವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಾನು ಮಾಡಿರುವುದು ಸರಿ ಎಂದು ಸಮರ್ಥಿಸಿಕೊಂಡಿದ್ದಾನೆ. ಜಾನ್ ಪರವಾಗಿ ಕೆಲವರು ಮಾದ್ಯಮದ ಮುಂದೆ ಕ್ಷಮೆಯಾಚಿಸಿದ್ದಾರೆ. ತಪ್ಪು ಮಾಡಿದಾತನಿಗೆ ತಾನು ಮಾಡಿದ್ದು ತಪ್ಪು ಅಲ್ಲ ಎಂಬ ಭಾವನೆಯಿರುವಾಗ ಅತನ ಪರವಾಗಿ ಕ್ಷಮೆ ಕೇಳಿರುವ ವ್ಯಕ್ತಿಗಳ ಕ್ಷಮೆಯನ್ನು ಕರಾವಳಿ ಜನತೆ ಹಾಗೂ ಕರವೇ ಛಲಪತಿ ಬಣ ಪರಿಗಣಿಸುವುದಿಲ್ಲ. ತುಳುನಾಡಿನ ಮೇಲಾಗುವ ಅವಮಾನಗಳನ್ನು ಕರಾವಳಿಯ ಜನತೆ ಹಾಗೂ ಕರವೇ ಛಲಪತಿ ಬಣ ಎಂದಿಗೂ ಸಹಿಸುವುದಿಲ್ಲ. ಅವಮಾನ ಮಾಡುವ ವ್ಯಕ್ತಿಗಳ ಮೇಲೆ ಉಗ್ರ ಪ್ರತಿಭಟನೆಗೂ ಸಿದ್ದ ಎಂದರು.