ವಿಟ್ಲ, ಜ 05 (Daijiworld News/MB) : ಅಪ್ರಾಪ್ತೆಯೊಬ್ಬಳು ಗರ್ಭಿಣಿಯಾದ ವಿಚಾರದಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕೊಳ್ನಾಡು ಗ್ರಾಮದ ಈ ಬಾಲಕಿಯನ್ನು 2019ರ ಫೆಬ್ರವರಿ ತಿಂಗಳಲ್ಲಿ ಇರಾ ಗ್ರಾಮದ ಯುವಕನೊಂದಿಗೆ ಮದುವೆಯಾಗಿತ್ತು. ಬಾಲಕಿಯು ನವೆಂಬರ್ ತಿಂಗಳಲ್ಲಿ ಆರೋಗ್ಯ ತಪಾಸಣೆಗೆಂದು ಹೋದ ಸಂದರ್ಭದಲ್ಲಿ ಆಕೆಯ ವಯಸ್ಸಿನ ಕುರಿತು ದಾಖಲೆಗಳನ್ನು ಕೇಳಿದ್ದು ಆಗ ಆಕೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ.
ಜ1 ರಂದು ಮತ್ತೆ ವೈದ್ಯಕೀಯ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಆಕೆ 24 ವಾರಗಳ ಗರ್ಭಿಣಿ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ಜಬಾರ್, ಅನೀಮಾ, ಇಬ್ರಾಹಿಂ ಸಾಹೇಬ್, ಮೈಮುನಾ, ಮೊಹಮ್ಮದ್ ರಫೀಕ್ ಹಾಗೂ ಅಸೈಗೋಳಿ ಚಿಟ್ಲೆಪದವು ಅಲ್ ಮದೀನಾ ಕಮ್ಯೂನಿಟಿ ಹಾಲ್ ವ್ಯವಸ್ಥಾಪಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.