ಶಿರಾಡಿ, ಜ 04(Daijiworld News/MSP): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಕೊಡ್ಡೇಲು ಎಂಬಲ್ಲಿ ಮಾರುತಿ 800 ಕಾರೊಂದು ಆಕಸ್ಮಿಕವಾಗಿ ಬೆಂಕಿ ಹಿಡಿದು ಹೊತ್ತಿ ಉರಿದ ಘಟನೆ ಜ.4 ರ ಬೆಳಗ್ಗೆ ನಡೆದಿದೆ.
ಕಡಬ ತಾಲೂಕು ರಾಮಕುಂಜ ನಿವಾಸಿ ಪ್ರವೀಣ್ ಡಿಸೋಜ ರವರು ಬೆಂಗಳೂರಿನಿಂದ ರಾಮಕುಂಜದ ತನ್ನ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಾಹನದಲ್ಲಿ ಹೊಗೆ ಆವರಿಸಿರುವುದನ್ನು ಗಮನಿಸಿದ ಪ್ರವೀಣ್ ಕಾರಿನಿಂದ ಹೊರಗಡೆ ಇಳಿದಿದ್ದಾರೆ. ಇದರಿಂದಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣವಾಗಿ ನಾಶವಾಗಿದೆ.
ನೆಲ್ಯಾಡಿ ಹೊರಠಾಣಾ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.