ಉಡುಪಿ, ಜ 03 (DaijiworldNews/SM): ಇತ್ತೀಚಿಗೆ ಉಡುಪಿ ಜಿಲ್ಲೆಗೆ ನೂತನವಾಗಿ ನೇಮಕಗೊಂದಿದ್ದ ಎಸ್ಪಿ ಎನ್. ವಿಷ್ಣುವರ್ಧನ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ನಾಟಕೀಯ ಬೆಳವಣಿಗೆ ಎಂಬಂತೆ ಉಡುಪಿ ಜಿಲ್ಲೆಗೆ ಒಂದೇ ದಿನ ಇಬ್ಬರು ಪೊಲೀಸ್ ವರಿಷ್ಟಾಧಿಕಾರಿಗಳನ್ನು ನೇಮಕಗೊಳಿಸಲಾಗಿತ್ತು. ಇದೀಗ ನೂತನ ಎಸ್ಪಿಯಾಗಿ ಎನ್.ವಿಷ್ಣುವರ್ಧನ್ ಅವರು ಶುಕ್ರವಾರದಂದು ಅಧಿಕಾರ ವಹಿಸಿಕೊಂಡಿದ್ದಾರೆ.
ನಿಶಾ ಜೇಮ್ಸ್ ಅವರ ವರ್ಗಾವಣೆ ಬಳಿಕ ಒಂದೇ ದಿನದಲ್ಲಿ ವರ್ಗಾವಣೆಗೊಂಡಿದ್ದ ಎಸ್ಪಿ ಅಕ್ಷಯ್ ಅವರಿಂದ ವಿಷ್ಣುವರ್ಧನ್ ಅಧಿಕಾರವನ್ನು ಸ್ವೀಕರಿಸಿಕೊಂಡಿದ್ದಾರೆ. ಎನ್.ವಿಷ್ಣುವರ್ಧನ್ ಬೆಂಗಳೂರು ಆಡಳಿತ ವಿಭಾಗದ ಉಪ ಆಯುಕ್ತರಾಗಿದ್ದರು. ಎನ್.ವಿಷ್ಣುವರ್ಧನ್ ಅವರನ್ನು ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸರಕಾರ ನಿಯುಕ್ತಿಗೊಳಿಸಿ ಜನವರಿ ಒಂದರಂದು ಆದೇಶ ನೀಡಿತ್ತು.
ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ಎನ್.ವಿಷ್ಣುವರ್ಧನ್ ಅವರು ಈ ಹಿಂದೆ 2016ರಲ್ಲಿ ಉಡುಪಿ ಜಿಲ್ಲೆಯ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.