ಕಾರ್ಕಳ, ಜ 3(Daijiworld News/MSP): ಪ್ರೇಮ ವಿವಾಹವಾಗಿ ಕೈ ಕೊಟ್ಟ ಪ್ರಿಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಲೇರಿದ ಘಟನೆ ಕಾರ್ಕಳದ ನೀರೆ ಬೈಲೂರಿನಲ್ಲಿ ನಡೆದಿದೆ. ಬೆಂಗಳೂರಿನ ನೆಲಮಂಗಲದ ಪರ್ವಿನ್ ತಾಜ್ (29) ಪ್ರಕರಣದ ದೂರುದಾರರಾಗಿದ್ದಾರೆ.
ಕಾರ್ಕಳ ತಾಲೂಕು ಬೈಲೂರು ನೀರೆ ಗ್ರಾಮದ ಪತಿ ಸಂದೀಪ್ ಶೆಟ್ಟಿ ಹಾಗೂ ಮೈದುನ ಸಂದೇಶ್ ಪ್ರಕರಣದ ಆರೋಪಿತರು. 2018 ಎಪ್ರಿಲ್ 18ರಂದು ಬೆಂಗಳೂರು ಉತ್ತರ ತಾಲೂಕು ದಾಸನಪುರ ಮಾರನಹಳ್ಳಿ ಶ್ರೀರಾಮಾಂಜನೇಯ ಗೆಳೆಯರ ಬಳಗ(ರಿ)ದಲ್ಲಿ ಹಿಂದೂ ಸಂಪ್ರದಾಯದಂತೆ ಪರ್ವಿನ್ ತಾಜ್ಳನ್ನು ಸಂದೀಪ್ ಶೆಟ್ಟಿ ವಿವಾಹವಾಗಿದ್ದನು. ಸುಮಾರು ಸುಮಾರು 25 ದಿನ ಪರ್ವಿನ್ ತಾಜ್ಳ ತಾಯಿಯ ಮನೆಯಲ್ಲಿ ದಂಪತಿ ವಾಸ್ತವ್ಯ ಇದ್ದರು.
2019 ಸಪ್ಪೆಂಬರ್ 1ರಂದು ಸಂದೀಪ್ ಶೆಟ್ಟಿ ತನ್ನ ಊರಿಗೆ ಹೋಗುತ್ತೇನೆಂದು ಅಲ್ಲಿಂದ ಹೊಟುಹೋಗಿದ್ದನು. ನಂತರದಲಿ ಪೋನ್ ಕರೆ ಮಾಡಿದರು ಸ್ವಿಚ್ ಆಫ್ ಎಂಬ ಮಾಹಿತಿ ಮಾತ್ರ ಲಭಿಸುತ್ತಿರುವುದರಿಂದ ಈ ಕುರಿತು ಸಂದೀಪ್ ಶೆಟ್ಟಿಯ ಸಹೋದರಾದ ಸಂದೇಶ ಶೆಟ್ಟಿ ಮತ್ತು ಶ್ರೀಕಾಂತ್ ಶೆಟ್ಟಿಯವರಿಗೆ ಪರ್ವಿನ್ ತಾಜ್ ಕರೆ ಮಾಡುತ್ತಾಳೆ. ಅದಕ್ಕೆ ಪತ್ರಿಯಾಗಿ ಅವರಿಬ್ಬರು ಅವಾಚ್ಯ ಶಬ್ದಗಳಿಂದ ಬೈದು, ಮುಂದಕ್ಕೆ ನಮಗೆ ಪೋನ್ ಕರೆ ಮಾಡಬಾರದೆಂದು ಬೆದರಿಕೆ ಹಾಕುತ್ತಾರೆ.
ಈ ಕುರಿತು ಸಪ್ಪೆಂಬರ್೩ರಂದು ಪರ್ವಿನ್ ತಾಜ್ ಬೆಂಗಳೂರಿನ ನೆಲಮಂಗಳ ನಗರ ಪೊಲೀಸ್ ಠಾಣೆಗೆ ನೀಡುತ್ತಾರೆ.
ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಂದೀಪ್ ಶೆಟ್ಟಿ ನೆಲಮಂಗಳ ಪೊಲೀಸರಿಗೆ ಹೇಳಿಕೆ ನೀಡಿ, ತಾನು ಪರ್ವಿನ್ ತಾಜ್ನಲ್ಲಿ ಅನೋನ್ಯತೆಯಿಂದ ಇರುವುದಾಗಿ ತಿಳಿಸಿ ಪತ್ನಿ ಪರ್ವಿನ್ ತಾಜ್ಳನ್ನು ಬೈಲೂರು ಮನೆಗೆ ಕರೆದುಕೊಂಡು ಬರುತ್ತಾನೆ. ಅಲ್ಲಿ ಮೈದುನ ಸಂದೇಶ ಶೆಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದು, ಹೊಡೆದು, ಮನೆಗೆ ಬಾರದಂತೆ ಬೆದರಿಕೆಯೊಡ್ಡುತ್ತಾನೆ.
ಅದೇ ಕಾರಣದಿಂದ ಪರ್ವಿನ ತಾಜ್ ತವರು ಮನೆ ಸೇರುತ್ತಾಳೆ. ಅಲ್ಲಿಗೆ ಹೋದ ಪತಿ ಸಂದೀಪ್ ಶೆಟ್ಟಿ ಹಣದ ಬೇಡಿಕೆ ಮುಂದಿಡುತ್ತಾನೆ ಅದರಂತೆ ಪರ್ವಿನ್ ತಾಜ್ ಸ್ತ್ರೀ ಶಕ್ತಿ ಗುಂಪಿನಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ಸಾಲವಾಗಿ ಪಡೆದ ಪತಿಗೆ ನೀಡುತ್ತಾಳೆ. ಅದು ಮಾತ್ರವಲ್ಲದೇ ಐದು ಲಕ್ಷದ 20 ಸಾವಿರ ರೂಪಾಯಿಗಳನ್ನು ನೀಡುತ್ತಾಳೆ ಅದನ್ನು ಒಟ್ಟು ಮಾಡಿ ಪಡಕೊಂಡು ಹೋದ ಸಂದೀಪ್ ಶೆಟ್ಟಿ ಮತ್ತೇ ಅವಳತ್ತ ಮುಖ ಮಾಡಿಲ್ಲ.
ಪತಿಯ ಹುಡುಕಿ ಬಂದಳು:
ಪತಿ ಸಂದೀಪ್ ಶೆಟ್ಟಿ ಯನ್ನು ಹುಡುಕಿಕೊಂಡು ಬಂದ ಪರ್ವಿನ್ ತಾಜ್ಳಿಗೆ 2019 ಡಿಸೆಂಬರ್ 24ರ ರ ಸಂಜೆ 4.30 ಗಂಟೆಗೆ ನೀರೆ ಬೈಲೂರಿನ ಮನೆ ಸಮೀಪದಲ್ಲಿ ಸಂದೀಪ ಶೆಟ್ಟಿ ಹಲ್ಲೆ ಮಾಡುತ್ತಾನೆ. ಮನೆಯೊಳಗಿದ್ದ ಪರ್ವಿನ್ ತಾಜ್ ಅವರ ಬ್ಯಾಗನ್ನು ಹೊರಗೆ ಹಾಕಿ ಮನೆಯಿಂದ ಹೊರಟು ಹೋಗುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ಕುರಿತು ದೂರಿನಲ್ಲಿ ವಿವರಿಸಿದ್ದಾರೆ.
ಬೆದರಿಕೆಯೊಡ್ಡಿದ ಮೈದುನ ಉರಗ ಕಡಿತಕ್ಕೆ ಮೃತ್ಯು
ಪರ್ವಿನ್ ತಾಜ್ಳಿಗೆ ಮನೆಗೆ ಬರದಂತೆ ಬೆದರಿಕೆಯೊಡ್ಡಿದ್ದ ಮೈದುನ ಶ್ರೀಕಾಂತ್ ಶೆಟ್ಟಿ ನವಂಬರ್ ೧೯ರಂದು ಉರಗ ಕಡಿತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ಪೊಲೀಸ್ ಮೂಲಗಳಿಂದ ದೃಢಪಟ್ಟಿದೆ.
ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತಿ ಸಂದೀಪ್ ಶೆಟ್ಟಿ ಮೈದುನ ಸಂದೇಶ್ ಶೆಟ್ಟಿ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.