ಕಾಸರಗೋಡು, ಜ 3(Daijiworld News/MSP): ಕೇಂದ್ರ ಗುಪ್ತಚರ ಇಲಾಖೆಯ ಕಾಸರಗೋಡು ಬ್ಯುರೋ ಅಧಿಕಾರಿ ಯೋರ್ವರು ಕಾರಿನಲ್ಲೇ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ.
ಆಲಪ್ಪುಯದ ರಿಜೋ ಫ್ರಾನ್ಸಿಸ್ (35) ಮೃತಪಟ್ಟವರು.
ಬೇಕಲ ಪೇಟೆಯ ಲ್ಲಿ ನಿಲುಗಡೆ ಗೊಳಿಸಿದ್ದ ಕಾರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ .
ರಿಜೋ ರವರು ನಿನ್ನೆ ರಾತ್ರಿ ತಮ್ಮ ಸ್ವಂತ ಕಾರಿನಲ್ಲಿ ಉದುಮಕ್ಕೆ ತೆರಳಿದ್ದು, ಬೇಕಲ ಪೇಟೆ ಬಳಿ ಇಂಡಿಕೇಟರ್ ಆಫ್ ಮಾಡದೆ ಕಾರು ನಿಲುಗಡೆ ಗೊಳಿಸಿದನ್ನು ಗಮನಿಸಿದ ಸ್ಥಳೀಯರು ಕಾರಿನ ಬಳಿ ಬಂದು ನೋಡಿದಾಗ ರಿಜೋರವರು ಕಾರಿನೊಳಗೆ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೇಕಲ ಪೊಲೀಸರಿಗೆ ಮಾಹಿತಿ ನೀಡಿದ್ದು, ವೈದ್ಯರು ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ಖಚಿತಗೊಂಡಿದೆ.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.