ಮಂಗಳೂರು, ಜ 3(Daijiworld News/MSP): 30 ವರ್ಷದ ಯುವಕನೋರ್ವ ನಗರದ ನೇತ್ರಾವತಿ ಸೇತುವೆಯಿಂದ ಯತ್ನಿಸಿದ್ದು, ಇದೀಗ ಯುವಕನ ಮೃತದೇಹ ಪತ್ತೆಯಾಗಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/030120-py-died1.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_030120_netravati1.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_030120_netravati2.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_030120_netravati3.jpg)
![](https://daijiworld.ap-south-1.linodeobjects.com/iWeb/tvdaijiworld/images6/allwyn_030120_netravati4.jpg)
ಜ.3 ರ ಬೆಳಿಗ್ಗೆ 6:30 ಕ್ಕೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ನದಿಗೆ ಹಾರಿದ ಯುವಕನನ್ನು ಉಳ್ಳಾಲಬೈಲ್ ನಿವಾಸಿ ನಾವೇಶ್ ಎಂದು ಗುರುತಿಸಲಾಗಿದೆ. ಬೆಳಗ್ಗಿನ ಜಾವ ಮನೆಯಿಂದ ಹೊರಟವರು ನೇತ್ರಾವತಿ ನದಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ನದಿಗೆ ಜಿಗಿದು ಆತ್ಮಹತ್ಯೆ ನಡೆಸಿದ್ದಾರೆ.
ನಾವೇಶ್ ಅವರು ಕುತ್ತಾರು ಸನಿಹ ಶಾಮಿಯಾನ ಹಾಗೂ ನೀರಿನ ಟ್ಯಾಂಕರ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆತ್ಮಹತ್ಯೆಯ ಹಿಂದೆ ಆರ್ಥಿಕ ಮುಗ್ಗಟ್ಟಿನ ಸಮಸ್ಯೆಯಿದೆ ಎಂದು ಶಂಕಿಸಲಾಗಿದೆ.
ನಾವೇಶ್ ಅವಿವಾಹಿತರಾಗಿದ್ದು, ತಾಯಿ, ತಂದೆ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಮೃತದೇಹ ಪತ್ತೆಯಾಗಿದೆ.