ಉಡುಪಿ, ಜ24 : ಆಳ ಸಮುದ್ರ ಹಾಗೂ ಪರ್ಷಿಯನ್ ಮೀನುಗಾರರ ನಡುವಿನ ಸಂಘರ್ಷ ಕೊನೆಗೂ ಸುಖಾಂತ್ಯ ಕಂಡು ಕೊಂಡಿದೆ. ನೈಟ್ ಲೈಟ್ ಪಿಶಿಂಗ್ನ್ನು ಸ್ಥಗಿತಗೊಳಿಸುವಂತೆ ಆಳ ಸಮುದ್ರ ಮೀನುಗಾರರು ತಮ್ಮ ತಮ್ಮ ಬೋಟುಗಳನ್ನು ಮಲ್ಪೆ ಕಡಲ ಕಿನಾರೆಯಲ್ಲಿ ಲಂಗಾರು ಹಾಕಿ ಸಾಮೂಹಿಕವಾಗಿ ಮುಷ್ಕರ ಹೂಡಿದ್ದರು. ಜಿಲ್ಲಾಧಿಕಾರಿಗಳು ಜನರೇಟ್ ಅಳವಡಿಸಿ ನೈಟ್ ಲೈಟ್ ಪಿಶಿಂಗ್ ಮಾಡುವ ಬೋಟುಗಳನ್ನು ವಶ ಪಡಿಸುವಂತೆ ಮೀನುಗಾರಿಕೆ ಇಲಾಖೆಗೆ ಆದೇಶ ನೀಡಿದ್ದರು. ಇನ್ನೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೈಟ್ ಲೈಟ್ ಪಿಶಿಂಗ್ ಹಾಗೂ ಬುಲ್ ಟ್ರಾ ಮೀನುಗಾರಿಕೆ ನಿಷೇದಾಜ್ಞೆ ಹೇರಿತ್ತು. ಆಳ ಸಮುದ್ರ ಮೀನುಗಾರರು ಬುಲ್ ಟ್ರಾಲ್ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಸರಕಾರ ಆದೇಶ ಪಾಲಿಸಿದ್ರೆ ನೈಟ್ ಲೈಟ್ ಪಿಶಿಂಗ್ ಮೀನುಗಾರರು ಜನರೇಟ್ ಆಳವಡಿಸಿ ಮೀನುಗಾರಿಕೆ ನಡೆಸುತ್ತಿದ್ರು.ಈ ಹಿನ್ನಲೆಯಲ್ಲಿ ಆಳ ಸಮುದ್ರ ಮೀನುಗಾರರು ನೈಟ್ ಲೈಟ್ ಪಿಶಿಂಗ್ನ್ನು ಸ್ಥಗಿತಗೊಳಿಸುವಂತೆ ಕಳೆದ 15 ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದರು . ಆಳ ಸಮುದ್ರ ಹಾಗೂ ಪರ್ಷಿಯನ್ ಮೀನುಗಾರರ ಸಮಸ್ಯೆಯನ್ನು ಇತ್ಯಾರ್ಥಗೊಳಿಸಲು ಮಲ್ಪೆ ಮೀನುಗಾರರ ಸಂಘ ಅವಿರತ ಪ್ರಯತ್ನ ನಡೆಸಿತ್ತು. ಆದ್ರೆ ಇವರ ಪ್ರಯತ್ನ ಸಫಲತೆ ಕಂಡುಕೊಂಡಿರಲಿಲ್ಲ. ಮೀನುಗಾರಿಕ ಸಚಿವ ಪ್ರಮೋದ್ ಮದ್ವರಾಜ್ ಅವರ ಮದ್ಯಸ್ಥಿಕೆಯಲ್ಲಿ ಮತ್ತೆ ಅನುಸಂದಾನ ಸಭೆ ಜ 24 ರ ಬುಧವಾರ ಮಲ್ಪೆಯ ಮೊಗವೀರ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಪರ್ಷಿಯನ್ ಹಾಗೂ ಆಳಸಮುದ್ರ ಮೀನುಗಾರರು ಹೊಂದಾಣಿಕೆಯ ಮೂಲಕ ಇಂದಿನಿಂದಲೇ ಮೀನುಗಾರಿಕೆಯಲ್ಲಿ ತೊಡಗುವ ನಿರ್ಧಾರ ತಾಳಿದ್ದಾರೆ. ಪೆಬ್ರವರಿ ತಿಂಗಳ ಅಂತ್ಯದ ಬಳಿಕ ನೈಟ್ ಲೈಟ್ ಪಿಶಿಂಗ್ನ್ನು ಸಂಪೂರ್ಣ ಸ್ಥಗಿತಗೊಳಿಸುವ ಸಭೆಯ ನಿರ್ದಾರಕ್ಕೆ ಪರ್ಷಿಯನ್ ಮೀನುಗರರು ಸಹಮತ ವ್ಯಕ್ತಪಡಿಸಿದ್ರೆ ಆಳ ಸಮುದ್ರ ಮೀನುಗಾರರು ಇಂದಿನಿಂದಲೇ ಬುಲ್ ಟ್ರಾ ಮೀನುಗಾರಿಕೆಯನ್ನು ಸ್ಥಗಿತಗೊಳಿಸುವುದಾಗಿ ಒಪ್ಪಿಗೆ ನೀಡಿದ್ರು. ಒಟ್ಟಾರೆಯಾಗಿ ಬಹುದಿನಗಳಿಂದ ನಡೆಯುತ್ತಿದ್ದ ಪರ್ಷಿಯನ್ ಹಾಗೂ ಆಳ ಸಮುದ್ರ ಮೀನುಗಾರರ ನಸುಕಿನ ಗುದ್ದಾಟ ಕೊನೆಗೂ ಅಂತ್ಯ ಕಂಡಿದ್ದು ಮಲ್ಪೆ ಮೀನುಗಾರರ ಸಂಘ ನಿಟ್ಟುಸಿರು ಬಿಟ್ಟಿದೆ.