ಮೂಡುಬಿದಿರೆ, ಸೆ15: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಡುಮಾರ್ನಾಡು ಅಚ್ಚರಕಟ್ಟ ಎಂಬಲ್ಲಿ ಘಟನೆ ನಡೆದಿದ್ದು, ನೀರು ಕೇಳುವ ನೆಪದಲ್ಲಿ ಹನ್ನೆರಡರ ಹರೆಯದ ಬಾಲಕಿಯ ಮಾನಭಂಗಕ್ಕೆ ನೆರೆಮನೆಯ ಸದಾಶಿವ ಎಂಬಾತ ಯತ್ನಿಸಿರುವುದಾಗಿ ದೂರು ನೀಡಲಾಗಿದೆ. ಘಟನೆ ನಡೆದ ವೇಳೆಗೆ ಸಂತ್ರಸ್ತೆ ಬಾಲಕಿಯ ಹೆತ್ತವರು ಜೌಷಧಿ ತರುವುದಕ್ಕಾಗಿ ಮೂಡುಬಿದಿರೆಗೆ ಹೋಗಿದ್ದರು ಎನ್ನಲಾಗಿದೆ. ಆರೋಪಿ ನಾಪತ್ತೆಯಾಗಿದ್ದು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿ ಪೋಲಿಸರು ತನಿಖೆ ಮುಂದುವರಿಸಿದ್ದಾರೆ.