ಮಂಗಳೂರು, ಡಿ 31 (Daijiworld News/MB) : ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ನೂತನ ಸಂಯೋಜನಾಧಿಕಾರಿಯಾಗಿ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರಾಣಿಶಾಸ್ತ್ರ ವಿಭಾಗ ಉಪನ್ಯಾಸಕಿ ಡಾ.ನಾಗರತ್ನ ಕೆ.ಎ ಅಧಿಕಾರ ವಹಿಸಿಕೊಂಡಿದ್ದಾರೆ.
4 ವರ್ಷ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಅವರು ರಾಜ್ಯಪಾಲರಿಂದ ಅತ್ಯುತ್ತಮ ಸೇವಾ ಯೋಜನಾಧಿಕಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ.