ಮಂಗಳೂರು, ಡಿ 31 (Daijiworld News/PY) : ಫೇಸ್ಬುಕ್, ವಾಟ್ಸ್ಆಪ್ ಹಾಗೂ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ದ ದಾಳಿ ಮಾಡಿ, ರಕ್ತಪಾತ ನಡೆಸುವಂತೆ ಪ್ರಚೋದಿಸುವಂತ ಸಂದೇಶಗಳನ್ನು ರವಾನಿಸುತ್ತಿದ್ದ ಎಂಬ ಆರೋಪದ ಮೇಲೆ ಯುವಕನೊಬ್ಬನನ್ನು ಸೈಬರ್ ಅಪರಾಧ ಠಾಣಾ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.
ಬಂಧಿತ ಯುವಕನ್ನು ನಗರದ ಪಾಂಡೇಶ್ವರ ನಿವಾಸಿ ಮೊಯ್ದೀನ್ ಹಫೀಜ್ ಎಂದು ತಿಳಿದುಬಂದಿದೆ.
"ಬಂಧಿತ ಆರೋಪಿ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿದ್ದ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಜನರನ್ನು ಪ್ರಚೋದಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನೆ ಮಾಡುತ್ತಿದ್ದ" ಎಂದು ನಗರ ಪೊಲೀಸ್ ಕಮೀಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.