ಸೆ16: ಮಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ
ರಾತ್ರಿಯಿಂದಲೇ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೊಟ್ಟಾರ ಚೌಕಿಯಲ್ಲಿ ಅಂಗಡಿಗೆ ನೀರು ನುಗ್ಗಿದ ವರದಿಯಾಗಿದೆ. ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರರು ಪರದಾಡುವಂತಾಗಿದೆ. ಸುರತ್ಕಲ್, ವಾಮಂಜೂರು, ಉಡುಪಿ, ಕುಂದಾಪುರ, ವಗ್ಗ, ಕಾವಳಕಟ್ಟೆ, ಪುಂಜಾಲಕಟ್ಟೆ,ಯಲ್ಲಿಯೂ ಮಳೆ ಸುರಿಯುತ್ತಿರುವ ವರದಿಯಾಗಿದೆ.