ಮಂಗಳೂರು, ಡಿ 30 (Daijiworld News/ MB ) : ವಿಡಿಯೋ ಹಾಗೂ ಸಿಸಿ ಟಿವಿ ಚಿತ್ರೀಕರಣ ಆಧಾರದಲ್ಲಿ ನಗರದಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾದವರ ಗುರುತು ಹಿಡಿಯಲಾಗುತ್ತಿದ್ದು, ಖಚಿತ ಸಾಕ್ಷ್ಯಾಧಾರಗಳು ದೊರೆತ ಬಳಿಕ ಆರೋಪಿಗಳನ್ನು ಪೊಲೀಸರು ಬಂಧನ ಮಾಡುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂದರ್ ಪೊಲೀಸ್ ಠಾಣೆಯಲ್ಲಿ 12 ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧನ ಮಾಡಲಾಗಿದೆ.
ಬಂಧಿತರನ್ನು ಮಂಜನಾಡಿಯ ಮುಹಮ್ಮದ್ ಅಜರ್ (22), ತೊಕ್ಕೊಟ್ಟು ನಿವಾಸಿ ತಂಜಿಲ್ (20), ಅಡ್ಯಾರ್ ಕಣ್ಣೂರು ನಿವಾಸಿಗಳಾದ ಮುಹಮ್ಮದ್ ಇಕ್ಬಾಲ್ (27), ಮುಹಮ್ಮದ್ ಫಾರೂಕ್(32), ಬಿಸಿರೋಡ್ ಕಲ್ಲಮಜಲು ನಿವಾಸಿ ಆರ್ಯನ್ (30), ಉಡುಪಿ ಶಿರ್ವ ನಿವಾಸಿ ಆಸಿಕ್ (21), ಬಂಟ್ವಾಳ ಮಾರಿಪಳ್ಳ ನಿವಾಸಿ ನಾಜಿಮ್ (24), ಬಜಪೆ ನಿವಾಸಿ ಅನ್ವರ್ ಹುಸೈನ್ (23), ಕಾವೂರು ನಿವಾಸಿಗಳಾದ ಮುಹಮ್ಮದ್ ಫಯಾಝ್ (27), ಖಲಂದರ್ ಬಾಷಾ (20), ಪಂಜಿಮೊಗರು ನಿವಾಸಿ ಅಬ್ದುಲ್ ಹಫೀಝ್ (20) , ಕುಂಜತ್ಬೈಲ್ ದೇವಿನಗರ ನಿವಾಸಿ ನಾಸಿರುದ್ದೀನ್ (32) ಎಂದು ಗುರುತಿಸಲಾಗಿದೆ.
ಈ ಗಲಭೆಗೆ ಸಂಬಂಧ ಪಟ್ಟಂತೆ ಈವರೆಗೆ 24 ಪ್ರಕರಣಗಳು ದಾಖಲು ಮಾಡಲಾಗಿದ್ದು ಪ್ರಾರಂಭದಲ್ಲಿ 8 ಮಂದಿಯನ್ನು ಬಂಧನ ಮಾಡಲಾಗಿತ್ತು. ಈಗ ನಾಲ್ವರನ್ನು ಬಂಧನ ಮಾಡಲಾಗಿದೆ.
ಈ ಘಟನೆಯ ಬಳಿಕ ಪೊಲೀಸರಿಗೆ ಬೆದರಿಕೆ ಕರೆಗಳು ಬಂದಿದ್ದು ಆ ಕುರಿತು ಕೂಡಾ ಸೈಬರ್ ಅಪರಾಧ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.