ಕಾಸರಗೋಡು ಜ 23: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪ್ರತಿಭಟಿಸಿ ಜ 24 ರಂದು ಕೇರಳದಲ್ಲಿ ವಾಹನ ಮುಷ್ಕರ ನಡೆಯಲಿದೆ. ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ನಡೆಯಲಿರುವ ಮುಷ್ಕರದಲ್ಲಿ ಖಾಸಗಿ , ಕೆ ಎಸ್ ಆರ್ ಟಿ ಸಿ ಬಸ್ಸುಗಳು , ಲಾರಿ , ಟ್ಯಾಂಕರ್ , ಆಟೋ - ಟ್ಯಾಕ್ಸಿ ಸೇರಿದಂತೆ ಬಹುತೇಕ ವಾಹನಗಳು ಪಾಲ್ಗೊಳ್ಳಲಿವೆ. ಬಿ ಎಂ ಎಸ್ ಹೊರತು ಪಡಿಸಿ ಮಿಕ್ಕೆಲ್ಲಾ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲಿ ಸೂಚಿಸಿದೆ.ಕೇರಳ ಮೋಟಾರು ಉದ್ಯಮ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದ್ದು , ಸಂಚಾರ ಸಂಪೂರ್ಣ ಸ್ತಬ್ದಗೊಳ್ಳುವ ಸಾಧ್ಯತೆ ಇದೆ.
2014ರ ಬಳಿಕ ಜ 23 ರ ಮಂಗಳವಾರ ಪೆಟ್ರೋಲ್ ದರ ಗರಿಷ್ಠ ಮಟ್ಟವನ್ನು ತಲುಪಿದೆ. ಇದೇ ರೀತಿ ಡೀಸಿಲ್ ದರ ಲೀಟರ್ಗೆ ದಾಖಲೆಯ 63.20 ರೂ.ಗೆ ತಲುಪಿದೆ. ಮುಂಬಯಿಯಲ್ಲಿ ಪೆಟ್ರೋಲ್ ದರ 80 ರೂ. ದಾಟಿದ್ದು ಅಂತಾರಾಷ್ಟ್ರೀಯ ಕಚ್ಚಾ ತೈಲ ದರಗಳು ನಿರಂತರವಾಗಿ ಏರುತ್ತಿರುವುದೇ ದೇಶದಲ್ಲಿ ಪೆಟ್ರೋಲ್, ಡೀಸಿಲ್ ದರ ಏರಿಕೆಗೆ ಕಾರಣವಾಗಿದೆ.