ಬಂಟ್ವಾಳ, ಡಿ 27 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ವಿಟ್ಲದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾಜಿ ಐಎಎಸ್ ಅಧಿಕಾರಿ ಸರಕಾರದ ವಿರುದ್ಧ ಗುಡುಗಿದ್ದಾರೆ. ಭಾರತೀಯ ಹಾಗೂ ಬ್ರಾಹ್ಮಣಿಯಂ ನಡುವಿನ ಹೋರಾಟ ಇದಾಗಿದ್ದು, ತ್ರಿವರ್ಣ ಧ್ವಜವನ್ನು ಹಿಡಿದು ಗಾಂಧೀಜಿಯವರ ಅಹಿಸಾಂತ್ಮಕ ಮಾರ್ಗದಲ್ಲಿ ತಾಳ್ಮೆ, ಧೈರ್ಯದಿಂದ ಇನ್ನೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್ಆರ್ಸಿ ಮತ್ತು ಸಿಎಎ ವಿರುದ್ಧ ವಿಟ್ಲ ಮುಸ್ಲಿಂ ಒಕ್ಕೂಟದ ವತಿಯಿಂದ ಶುಕ್ರವಾರ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ "ಪೌರತ್ವ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ" ಎಂಬ ಧ್ಯೇಯದಡಿಯಲ್ಲಿ ನಡೆದ "ಬೃಹತ್ ಸಂರಕ್ಷಣಾ ಸಮಾವೇಶ"ದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಮೋದಿ, ಅಮಿತ್ ಶಾ ಫ್ಯಾಶಿಸಂನ ಚೌಕಟ್ಟಿನಡಿ ತಮ್ಮ ಅಜೆಂಡಾವನ್ನು ಕಾರ್ಯಗತಗೊಳಿಸಿತ್ತಿದ್ದು, ಇದೀಗ ನಮ್ಮ ಭಾರತಕ್ಕೆ, ಭಾರತೀಯರ ಪೌರತ್ವಕ್ಕರೆ ಕೈಹಾಕಿದೆ. ಆದರೆ, ಇದಕ್ಕೆ ಎಲ್ಲರೂ ಒಂದಾಗಿ ದೇಶದ್ಯಾಂತ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಿದಾಗ ಮೋದಿ, ಅಮಿತ್ ಶಾನ ಲೆಕ್ಕಾಚಾರ ಉಲ್ಟಾ ಆಗಿದ್ದು, ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಭಯದಿಂದ ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಫ್ಯಾಶಿಸಂ ಮತ್ತು ಬ್ಯಾಹ್ಮಣೀಯಂ ಎರಡು ಒಟ್ಟಾಗಿ ಸೇರಿಕೊಂಡು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಇದರಿಂದ ಮುಸ್ಲಿಮರು, ದಲಿತರು ಸಮಸ್ಯೆಯಾಗಿಲ್ಲ. ಬದಲಾಗಿ ನನ್ನ ಹಿಂದೂ ಸಹೋದರರನ್ನು ಕೂಡಾ ಮೂರ್ಖರಾನ್ನಾಗಿ ಮಾಡುತ್ತಿದೆ. ಹಿಂದು ರಾಷ್ಟ್ರ ಏನೆಂಬುದನ್ನು ಮೊದಲು ಹಿಂದುಗಳು ಅರ್ಥೈಸಿಕೊಳ್ಳಬೇಕಾಗಿದೆ. ಇದೊಂದು ಜಾತಿ, ಮನುರಾಷ್ಟ್ರದ ಕಲ್ಪನೆಯಾಗಿದ್ದು, ಬ್ರಾಹ್ಮಣರು ಮೇಲೆ ಉಳಿದ ಹಿಂದೂಗಳೆಲ್ಲರೂ ತಳಮಟ್ಟದಲ್ಲಿ ಜೀವಿಸುವ ಒಂದು ವ್ಯವಸ್ಥೆ ಎಂದರು.
ಧರ್ಮದ ಆಧಾರದಲ್ಲಿ ಸರಕಾರವನ್ನು ಪ್ರತಿಯೊಬ್ಬರು ಪ್ರಶ್ನೆಸುವುದರ ಜೊತೆಗೆ ನೀತಿಯನ್ನು ದಿಕ್ಕರಿಸಬೇಕಾಗಿದೆ. ಎನ್ಆರ್ಸಿ ಮಾಡಲು ಬದಲು ರಾಷ್ಟ್ರೀಯ ನಿರುದ್ಯೋಗಿಗಳ ಬಗ್ಗೆ ಸಮೀಕ್ಷೆ ನಡೆಸಬೇಕಾಗಿದೆ ಎಂದು ಹೇಳಿದರು.