ಕಾಸರಗೋಡು, ಡಿ 27 (DaijiworldNews/SM): ಆರ್ ಎಸ್ ಎಸ್ ಪಥ ಸಂಚಲನ ಸಂದರ್ಭದಲ್ಲಿ ಕಲ್ಲೆಸೆತ ನಡೆಸಿರುವ ಘಟನೆ ಶುಕ್ರವಾರ ಸಂಜೆ ನೀಲೇಶ್ವರ ಬಸ್ ನಿಲ್ದಾಣದ ಬಳಿ ನಡೆದಿದೆ.
ಪಥ ಸಂಚಲನದ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆದಿದೆ. ಈ ವೇಳೆ ಆಕ್ರೋಶಿತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಅಷ್ಟಕ್ಕೆ ಶಾಂತವಾಗದ ಆಕ್ರೋಶಿತರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ನೀಲೇಶ್ವರ ಬಸ್ಸು ನಿಲ್ದಾಣ ಬಳಿ ಆರ್ ಎಸ್ ಎಸ್ ಪಥ ಸಂಚಲನ ತಲುಪುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಿಪಿಎಂ ಕಾರ್ಯಕರ್ತರ ಕೃತ್ಯ ವೆಸಗಿದ್ದಾರೆ ಎಂದು ಆರ್ ಎಸ್ ಎಸ್ ಆರೋಪಿಸಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.