ಮಂಗಳೂರು, ಡಿ 27(Daijiworld News/PY) : "ರಾಮ ಜನ್ಮಭೂಮಿಯ ಸಮಸ್ಯೆ ಇತ್ಯರ್ಥವಾಗಿದ್ದರೂ, ರಾಮನ ಜನ್ಮ ಕುಂಡಲಿಯಿಂದಾಗಿಯೇ ಮಂದಿರ ನಿರ್ಮಾಣ ವ್ಯತ್ಯಯವಾಗಿದೆ" ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಮಂಗಳೂರು ನಗರದ ಸಂಘ ನಿಕೇತನದಲ್ಲಿ ವಿಶ್ವ ಹಿಂದು ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯ ಸಮಸ್ಯೆ ನಿವಾರಣೆಯಾಗಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣವಾಗಲಿ, ಶ್ರದ್ಧಾ, ಭಕ್ತಿಯ ಕೇಂದ್ರವಾಗಿ ರೂಪುಗೊಳ್ಳಲಿ" ಎಂದು ತಿಳಿಸಿದ್ದಾರೆ.
"ಹಿಂದೆಲ್ಲಾ ಬಡತನ,ಸಾಮಾಜಿ ಸಮಸ್ಯೆಗಳ ಕಾರಣಕ್ಕಾಗಿ ಅನುಕಂಪದ ನೆಲೆಯಲ್ಲಿ ಮತಾಂತರ ನಡೆಯುತ್ತಿತ್ತು, ಇತರೆ ಧರ್ಮದವರು ಮನೆ ಮನೆಗಳಿಗೆ ತೆರಳಿ ಸಮಸ್ಯೆಗೊಳದಾವರನ್ನು ತಮ್ಮ ಧರ್ಮಗಳಿಗೆ ಮತಾಂತರ ನಡೆಸುವ ಕೆಲಸ ನಡೆಯುತ್ತಿತ್ತು, ಆದರೆ ಈಗ ಗ್ರಾಮೀಣ ವಿಕಾಸ ಯೋಜನೆಗಳು ಸಮಾಜದಲ್ಲಿನ ಬಡವರ್ಗಕ್ಕೆ ಆರ್ಥಿಕ ಸಬಲತೆಯನ್ನು ನೀಡಿರುವುದರಿಂದ ಅನುಕಂಪದ ನೆಲೆಯಲ್ಲಿ ಮತಾಂತರ ಸಾಧ್ಯವಿಲ್ಲ" ಎಂದು ಹೇಳಿದರು.