ಮಂಗಳೂರು ಜ 23 : ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಮುಂಬೈನ ಭಿನ್ನ ಕೋಮಿನ ಯುವಕನೊಂದಿಗೆ ವಿವಾಹವಾಗಿದ್ದ ಕಾಸರಗೋಡು ಮೂಲದ ಯುವತಿ ರೇಷ್ಮಾ , ಮುಂಬೈ ಹೈಕೋರ್ಟ್ ನಲ್ಲಿ ಹಾಜರಾಗಿದ್ದು, ತನ್ನ ಹೆತ್ತವರೊಂದಿಗೆ ತೆರಳುವುದಾಗಿ ಆಕೆ ಹೇಳಿಕೆ ನೀಡಿದ್ದಾಳೆ. ಅದರಂತೆ ಆಕೆಯನ್ನು ಹೆತ್ತವರೊಂದಿಗೆ ಕಳಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ತನ್ನ ಪತ್ನಿ ರೇಷ್ಮಾಳನ್ನು ಅಪಹರಿಸಲಾಗಿದೆ ಎಂದು ಮುಂಬೈ ಹೈಕೋರ್ಟ್ ನಲ್ಲಿ ಮಹಮ್ಮದ್ ಇಕ್ಬಾಲ್ ಚೌಧುರಿ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಂಬಂಧಪಟ್ಟತೆ ರೇಷ್ಮಾ ಸೋಮವಾರ ಮುಂಬೈ ಹೈಕೋರ್ಟ್ ಗೆ ಹಾಜರಾಗಿ, ತನ್ನನ್ನು ಯಾರು ಅಪಹರಿಸಿಲ್ಲ, ತಾನು ಸ್ವ ಇಚ್ಚೆಯಿಂದ ತನ್ನ ಊರಿಗೆ ತೆರಳಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾಳೆ. ಅದನ್ನು ಪರಿಗಣಿಸಿ ಆಕೆಯ ಊರಿಗೆ ಮರಳುವಂತೆ ನ್ಯಾಯಲಯವೂ ಅನುಮತಿ ನೀಡಿದೆ. ಇದೇ ವೇಳೆ ಪ್ರಕರಣದಲ್ಲಿ ರೇಷ್ಮಾ ಪತಿ ಎಂದು ಹೇಳಿಕೊಂಡಿರುವ ಮಹಮ್ಮದ್ ಇಕ್ಬಾಲ್ ಕೂಡಾ ನ್ಯಾಯಾಲಕ್ಕೆ ಹಾಜರಾಗಿದ್ದರು. ಮಹಮ್ಮದ್ ಇಕ್ಬಾಲ್ ರೇಷ್ಮಾ ಹೆತ್ತವರ ವಿರುದ್ದ ದಾಖಲಿಸಿದ್ದ ಅರ್ಜಿ ಸಂಬಂಧಪಟ್ಟಂತೆ ತನಿಖೆಗೆ ತಡೆಯಾಜ್ಞೆ ನೀಡಿದೆ. ರೇಷ್ಮಾ ಪರವಾಗಿ ಮುಂಬೈನ ಸಂಜೀವ್ ಜಿ. ಪುಣೆಳ್ಕರ್ ವಾದಿಸಿದ್ದರು.
ಪ್ರಕರಣದಲ್ಲಿ ಬಂಧನಕ್ಕೊಳಗಾದ ಹಿಂದು ಸಂಘಟನೆಯ ಕಾರ್ಯಕರ್ತ ಸುನೀಲ್ ಪಂಪ್ ವೆಲ್ ಎಂಬಾತ ಬಿಡುಗಡೆಯಾಗುವ ಸಾಧ್ಯತೆ ಇದೆ.