ಬಂಟ್ವಾಳ, ಡಿ 27(Daijiworld News/PY) : ಕೋ. ಆಪರೇಟಿವ್ ಸೊಸೈಟಿಗೆ ನಕಲಿ ದಾಖಲಾತಿಗಳನ್ನು ನೀಡಿ ಸಾಲ ಪಡೆದು ವಂಚಿಸಿದ ಪ್ರಕರಣಕಕ್ಕೆ ಸಂಬಂಧಪಟ್ಟಂತೆ ವ್ಯಕ್ಕಿಯೊಬ್ಬನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ್ನು ಪಂಪ್ವೆಲ್ ನಿವಾಸಿ ಬಶೀರ್ ಯಾನೆ ಹಸನ್ ಬಶೀರ್ (42) ಎಂದು ಗುರುತಿಸಲಾಗಿದೆ.
ಈತ ಕರ್ವಾನ್ ಅಟೋಮೊಬೈಲ್ಸ್ನ ವಿವಿಧ ಕಂಪೆನಿಯ ಕಾರು ಮಾರಾಟಗಾರರು ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ಮಾಡಿಕೊಂಡಿದ್ದು, ಇದೇ ಹೆಸರಿನಲ್ಲಿ ನಕಲಿ ದಾಖಲಾತಿ ನೀಡಿ ಫರಂಗಿಪೇಟೆಯ ಸುಮಂಗಲ ಕೋ. ಆಪರೇಟಿವ್ ಸೊಸೈಟಿಯಲ್ಲಿ ಸುಮಾರು 7 ಲಕ್ಷ ಸಾಲ ಪಡೆದು ವಂಚಿಸಿದ್ದ.
ಮಾತ್ರವಲ್ಲದೇ ಕರ್ವಾನ್ ಅಟೋಮೊಬೈಲ್ಸ್ ಎಂದು ಅಸ್ತಿತ್ವದಲ್ಲಿರುವ ಕಾರು ಮಾರಾಟ ಸಂಸ್ಥೆಯ ಹೆಸರಿನಲ್ಲಿ ಮಂಗಳೂರು, ಬಂಟ್ವಾಳ, ವಿಟ್ಲ, ಮೂಡಬಿದ್ರೆ ವಿವಿಧ ಬ್ಯಾಂಕ್ ಗಳಿಗೆ ಬೇರೆಯವರ ಹೆಸರಿನಲ್ಲಿ ಕೊಟೇಶನ್ ನೀಡಿ ಸುಮಾರು 2 ಕೋಟಿ ರೂಪಾಯಿ ಅಧಿಕ ಹಣ ಪಡೆದ ವಂಚನೆ ಎಸಗಿರುವ ಮಾಹಿತಿ ತಿಳಿದು ಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.