ಮಂಗಳೂರು, ಡಿ 25(Daijiworld News/MSP): ಡಿ. 26ರಂದು ದಕ್ಷಿಣ ಭಾರತ ಅಪರೂಪದ ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಖಗೋಳಾಸಕ್ತರು ಈಗಾಗಲೇ ದಕ್ಷಿಣ ಭಾರತದತ್ತ ಲಗ್ಗೆ ಇಟ್ಟಿದ್ದಾರೆ. ಇನ್ನೂ ಗುರುವಾರ ಸಂಭವಿಸಲಿರುವ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಕರಾವಳಿಯ ಪ್ರಸ್ತಿದ್ದ ದೇವಾಲಯಗಳ ಭಕ್ತಾದಿಗಳಿಗೆ ದೇವರ ದರ್ಶನ ಹಾಗೂ ಪೂಜಾ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.
ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಸುಬ್ರಮಣ್ಯ, ಉಡುಪಿ ಕೃಷ್ಣಮಠ, ಕೊಲ್ಲೂರಿನಲ್ಲಿ ದೇವಸ್ಥಾನದ ಪೂಜಾ ವಿಧಿಗಳು ಹಾಗೂ ಭೋಜನ, ಪ್ರಸಾದ ವಿತರಣೆ ವ್ಯತ್ಯಾಸವಿರಲಿದೆ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ಬೆಳಗ್ಗೆ 7.45 ಕ್ಕೆ ಬೀಗಮುದ್ರೆ ಹಾಕಲಾಗುವುದು, ನಾಳೆ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದೇವರ ಪೂಜೆ, ದರ್ಶನ ಇತರ ಸೇವೆಗಳು ಇರುವುದಿಲ್ಲ ಆ ಬಳಿಕ 12.30 ರ ನಂತರ ಪೂಜೆ ದೇವರ ದರ್ಶನ ಸೇವೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಇನ್ನು ಕುಕ್ಕೆಯಲ್ಲೂ ದೇವದರ್ಶನ ಎಂದಿನಂತೆ ಲಭ್ಯವಾಗುವುದಿಲ್ಲ. ಬುಧವಾರ ಸಂಜೆ 5.30ಕ್ಕೆ ಮಹಾಪೂಜೆ ನಡೆಯಲಿದೆ. ಆ ಬಳಿಕ ಗುರುವಾರ ಸಂಜೆ 5 ಗಂಟೆಯ ನಂತರವೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಅಲ್ಲದೆ ಗುರುವಾರ ಮಧ್ನಾಹ್ನ ಭೋಜನ ವ್ಯವಸ್ಥೆ ಇರುವುದಿಲ್ಲ ಎಂಬುದಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.