ಮೂಡುಬಿದಿರೆ, ಡಿ 25(Daijiworld News/MSP): ಮಂಗಳೂರಿನಲ್ಲಿ ನಡೆಯುವ ಹಿಂಸಾಚಾರ ಪ್ರತಿಭಟನೆಯ ಮುನ್ನವೇ ಹೊತ್ತಿ ಉರಿಯುವ ಹೇಳಿಕೆಯನ್ನು ಶಾಸಕ ಖಾದರ್ ನೀಡಿದ್ದರು. ಖಾದರ್ ಅವರಿಗೆ ಅನ್ನ , ಹಾಗೂ ಜನ್ಮ ನೀಡಿದ ಈ ಭೂಮಿಗೆ ಬೆಂಕಿ ಹಾಕಲು ಹೊರಟ್ಟಿದ್ದಾರೆ ಶಾಸಕರು ಎಂದು ಸಚಿವ ಸಿ.ಟಿ.ರವಿ ಖಾದರ್ ವಿರುದ್ದ ಕಿಡಿಕಾರಿದ್ದಾರೆ.
ಮೂಡುಬಿದಿರೆಯಲ್ಲಿ ನಡೆದ ಕಂಬಳದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿ.ಟಿ. ರವಿ " ಮಂಗಳೂರಿನಲ್ಲಿ ಹಿಂಸಾರೂಪದ ಪ್ರತಿಭಟನೆ ನಿಯಂತ್ರಣಕ್ಕೆ ಬಂದಿರುವುದು ಪೊಲೀಸ್ ಫೈರಿಂಗ್ ಬಳಿಕ. ಪ್ರತಿಭಟನೆಗಳು ಯಾವತ್ತಿಗೂ ಪ್ರಚೋದನೆಯಾಗಬಾರದು, ಹೀಗಾಗಿ ಪೂರ್ವ ನಿಯೋಜಿತ ಕೃತ್ಯಕ್ಕೆ ಪರಿಹಾರ ನೀಡಲಾಗುವುದಿಲ್ಲ ಎಂದು ಹೇಳಿದರು.
ಯಾವತ್ತೂ ಯಾರೂ ಕೂಡಾ ಸಾವನ್ನು ಸಂಭ್ರಮಿಸಬಾರದು, ಆದರೆ ಬಲಿಯಾದವರು ಅಮಾಯಕರು ಎನ್ನುವರಿಗೆ ಸಿಸಿಟಿವಿಯ ದೃಶ್ಯಾವಳಿ ಉತ್ತರವಾಗಿದೆ. ಸತ್ತವರು ಅಮಾಯಕರಾಗಿದ್ದಾರೆ ಎನ್ನುವ ಸರ್ಟಿಫಿಕೇಟ್ ನೀಡುವ ರೀತಿಯ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಗಲಿಲ್ಲ.
ಗಲಭೆಯಲ್ಲಿ ಮೃತರಾದವರಿಗೆ ಪರಿಹಾರ ವಾಪಾಸ್ ಪಡೆಯುವ ನಿರ್ಧಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.