ಕಾರ್ಕಳ, ಡಿ 24 (Daijiworld News/PY) : ಬೆಳ್ಮಣ್ನ ಬೃಂದಾವನ ಮನೆಯಲ್ಲಿದ್ದ ಒಂಟಿ ಮಹಿಳೆ ಬಿ. ಭರತ ಲಕ್ಷ್ಮೀ(68) ಎಂಬವರನ್ನು ಕೊಲೆಗೈದು, ಸುಮಾರು 2,25 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ದರೋಡೆ ಮಾಡಿ, ಮೃತದೇಹವನ್ನು ಕಲ್ಯಾ ಹಾಳೆಕಟ್ಟೆಯ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿಗೆ ಎಸೆದ ಘಟನೆ ಡಿ.20ರಂದು ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೆಳ್ಮಣ್ನ ರೊನಾಲ್ಡ್ ಬರ್ಬೋಜ(45), ಸ್ಟೀಫನ್ ಡಯಾಸ್(22) ಎಂಬವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ಆರೋಪಿಗಳಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.