ಮಂಗಳೂರು, ಡಿ 24 (Daijiworld News/PY) : ನವ ಮಂಗಳೂರು ಬಂದರಿಗೆ ಈ ಋತುವಿನ ಕೊನೆಯ ಹಡಗು ಮಂಗಳವಾರ ಆಗಮಿಸಿದೆ.
ಕಾಸ್ಟವಿಕ್ಟೋರಿಯಾ ಎಂಬ ಹೆಸರಿನ ಈ ಹಡಗಿನಲ್ಲಿ ಒಟ್ಟು 1726 ಪ್ರವಾಸಿಗರು ಆಗಮಿಸಿದ್ದು, ಸಿಬ್ಬಂದಿಗಳು ಪ್ರವಾಸಿಗರನ್ನು ಕರಾವಳಿಯ ಸಂಪ್ರದಾಯವಾದ ಜಾನಪದ ನೃತ್ಯದ ಮೂಲಕ ಸ್ವಾಗತಿಸಿದರು. ಸುಮಾರು 625 ಪ್ರವಾಸಿಗರು ಮಂಗಳೂರಿನ ಸೊಬಗನ್ನು ಸವಿಯಲು ನೋಂದಣಿ ಮಾಡಿಸಿಕೊಂಡಿದ್ದಾರೆ.
ಇಟಲಿಯ ಈ ಹಡಗು ದುಬೈನಿಂದ ಮುಂಬೈಗೆ ತೆರಳಿದ್ದು ಇದೀಗ ಮಂಗಳೂರಿಗೆ ಆಗಮಿಸಿದ್ದು, ಇಂದು 7.45ಕ್ಕೆ ಕೊಚ್ಚಿಗೆ ಪ್ರಯಾಣ ಬೆಳೆಸಲಿದೆ.