ಮಂಗಳೂರು, ಡಿ 24 (Daijiworld News/MB) : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿ.23ರ ಬೆಳಗ್ಗೆ 6 ಗಂಟೆಯಿಂದ ಆರಂಭಿಸಿ ಡಿ.24ರ ಬೆಳಗ್ಗೆ 6ರವರೆಗೆ ನಿಷೇದಾಜ್ಞೆ ಇರಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್ ಅವರು ಹೇಳಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇದಾಜ್ಞೆ ಇಂದಿಗೆ ಅಂತ್ಯಗೊಂಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರತಿಭಟನೆ ನಡೆಯಲಿರುವ ಹಿನ್ನಲೆಯಲ್ಲಿ ಶಾಂತಿ ಕಾಪಾಡಲು ಡಿ.೧೮ರಂದು ನಿಷೇದಾಜ್ಞೆ ಹೊರಡಿಸಲಾಗಿತ್ತು. ಈ ನಿಷೇದಾಜ್ಞೆ ಇದ್ದರೂ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಲಾಟಿಚಾರ್ಚ್ ನಡೆಸಿದ್ದು ಹಿಂಸಾರೂಪಕ್ಕೆ ತಾಳಿದಾಗ ಗೋಲಿಬಾರ್ ನಡೆಸಲಾಗಿತ್ತು. ಈ ಗೋಲಿಬಾರ್ನಿಂದಾಗಿ ಇಬ್ಬರು ಮೃತಪಟ್ಟಿದ್ದರು.
ಪ್ರತಿಭಟನೆ ಹಿಂಸಾರೂಪ ತಾಳಿದ ಹಿನ್ನಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಯಿತು. ಹಾಗೆಯೇ 2 ದಿನಗಳ ಕಾಲ ನೆಟ್ವರ್ಕ್ ಸ್ಥಗಿತಗೊಳಿಸಲಾಗಿತ್ತು.
ಆ ಬಳಿಕ ನಗರ ಸಹಜ ಸ್ಥಿತಿಗೆ ಬಂದ ಹಿನ್ನಲೆಯಲ್ಲಿ ಕರ್ಫ್ಯೂ ಹಿಮ್ಮಡೆದು ನಿಷೇದಾಜ್ಞೆಯನ್ನು ಮುಂದುವರೆಸಲಾಗಿದ್ದು ಇಂದು ನಿಷೇದಾಜ್ಞೆ ಕೊನೆಗೊಂಡಿದೆ.