ಮಂಗಳೂರು, ಡಿ 24(Daijiworld News/MSP): ನಗರದಲ್ಲಿ ಡಿ.19 ರ ಅಹಿತಕರ ಘಟನೆಗಳ ಬಳಿಕ ಈಗ ಕೆಲವು ಪೊಲೀಸ್ ಅಧಿಕಾರಿಗಳಿಗಳಿಗೆ ಮತ್ತು ಅವರ ಕುಟುಂಬದವರಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆ ಬರುತ್ತಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾನೂನು ಕೈಗೆತ್ತಿಕೊಂಡು ಹಿಂಸಾಚಾರದ ಪ್ರತಿಭಟನೆ ನಡೆಸಿದ ಕಾರ್ಯಾಚರಣೆ ನಡೆಸಿದ ಪೊಲೀಸ್ ಕಮಿಷನರ್ ಡಾ. ಪಿ ಎಸ್ ಹರ್ಷ, ಕದ್ರಿ ಠಾಣೆ ಇನ್ಸ್ ಪೆಕ್ಟರ್ ಶಾಂತರಾಮ್ ಸೇರಿ ಉರ್ವ ಠಾಣೆ ಇನ್ಸ್ ಪೆಕ್ಟರ್ ಮೊಹಮ್ಮದ್ ಶರೀಷ್ ಹಾಗೂ ಬಂದರು ಪಾಂಡೇಶ್ವರ, ಕದ್ರಿ ಸೇರಿದಂತೆ ನಗರದ ವಿವಿಧ ಠಾಣೆಗಳಿಗೆ ವಿದೇಶದಿಂದ ಬೆದರಿಕೆ ಕರೆ ಬರುತ್ತಿದೆ. ಕದ್ರಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ್ ಅವರಿಗೆ ಕರೆ ಮಾಡಿದ ವ್ಯಕ್ತಿ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬಕರಿಗೂ ಜೀವಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.
ನಮ್ಮ ಟಾರ್ಗೆಟ್ ಪೊಲೀಸರು, ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರೆ ಇನ್ನೊಬ್ಬ ಕಿಡಿಗೇಡಿ ಆಡಿಯೋ ರೆಕಾರ್ಡ್ ಮಾಡಿ" ನಮ್ಮ ಜೀವ ತೆಗೆದ ಪೊಲೀಸರನ್ನು ಸುಮ್ಮನೆ ಬಿಡುವುದಿಲ್ಲ ಇನ್ನು ಇಲ್ಲ್ಗೆ ಯಾವ ಪೊಲೀಸರು ವರ್ಗಾವಣೆ ಆಗಿ ಬಾರದಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೂರು ದಾಖಲಾಗುತ್ತಿದ್ದಂತೆ ಸೈಬರ್ ಕ್ರೈಂ ಪೊಲೀಸರು ಕಿಡಿಗೇಡಿಗಳ ಕರೆಗಳ ಬೆನ್ನುಹತ್ತಿದ್ದು ತನಿಖೆ ನಡೆಸುತ್ತಿದ್ದಾರೆ.