ಕಾರ್ಕಳ, ಡಿ 23(Daijiworld News/MSP): ಬೆಳ್ಮಣ್ನಲ್ಲಿ ಚಿನ್ನಾಭರಣ ದರೋಡೆಗೈದು ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕೊಲೆಗೈದು ಪ್ಲಾಸ್ಟಿಕ್ ಟರ್ಪಲ್ನಲ್ಲಿ ಸುತ್ತಿ ಕಲ್ಯಾ ಹಾಳೆಕಟ್ಟೆಯ ಖಾಸಗಿ ಬಾವಿಯಲ್ಲಿ ಎಸೆದ ಪ್ರಕೆರಣವನ್ನು ಭೇದಿಸಿದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ಪೊಳೀಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ಮಣ್ನ ರೋನಾಲ್ಡ್, ಶಿರ್ವದ ಸ್ಪೀಪನ್ ಪ್ರಕರಣದ ಆರೋಪಿತರು. ಇವರು ಸಮಾನ ದುರುದ್ದೇಶ ಹೊಂದಿ ಡಿಸೆಂಬರ್ 20ರಂದು ಬೆಳ್ಮಣ್ನ ಬೃಂದಾವನ ಮನೆಗೆ ಅಕ್ರಮ ಪ್ರವೇಶ ಗೈದು ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ ಕೊಲೆಗೈದು ಮನೆಯ ಕವಾಟಿನಲ್ಲಿ ಇದ್ದ ಚಿನ್ನಾಭರಣಗಳನ್ನು ದರೋಡೆಗೈದಿದ್ದರು. ಪ್ರಕರಣ ಬೆಳಕಿಗೆ ಬಾರದಂತೆ ಪೂರ್ವ ನಿರ್ಧಾರಗೊಂದಿಗೆ ಅಲ್ಲಿಗೆ ಬಂದಿದ್ದ ಆರೋಪಿತರು ತಾವು ತಂದ ಪ್ಲಾಸ್ಟಿಕ್ ಟರ್ಪಲ್ನಲ್ಲಿ ಮಹಿಳೆಯ ಶವ ಸುತ್ತಿ ಕೃತ್ಯಕ್ಕೆ ಉಪಯೋಗಿಸಿದ ಕಾರಿನಲ್ಲಿ ಶವವನ್ನು ಸಾಗಾಟ ಮಾಡಿದ್ದರು.
ಹಾಳೆಕಟ್ಟೆ ಕಲ್ಯಾದ ಮೂಡುಮನೆ ಶಕುಂತಲಾ ಎಂಬವರಿಗೆ ಸೇರಿದ ಮನೆಯ ಬಾವಿಗೆ ಶವವನ್ನು ಹಾಕಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಮಹಿಳೆಯ ಮೃತದೇಹ ಪತ್ತೆಯಾಗಿದ್ದ ಬೆನ್ನಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದರು. ಪೊಲೀಸರ ಕಾರ್ಯದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.
ನಾಪತ್ತೆ ಎಂದು ದೂರು ದಾಖಲಾಗಿತ್ತು
ಕೆಲಸದಿಂದ ಹಿಂತಿಗಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ತಾಯಿ ನಾಪತ್ತೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದ ಅವರ ಮಗ ಕುರಿತು ಕೆಲಸ ಶ್ರೀನಾಥ ಉಡುಪ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.